ಬಹಳ ದಿನಗಳಿಂದ ಬರೆಯಬೇಕು ಅನ್ನಿಸಿತ್ತು ಆದರೆ ಬರೆಯಲು ಆಗಲೇ ಇಲ್ಲ. ಅದಕ್ಕೆ ಕಾರಣಗಳು ಹಲವಾರು ಇದ್ದವು ಅದರಲ್ಲಿ ಮುಖ್ಯವಾದವು ಕೆಲಸ,ಎನುಬರೆಯಬೇಕೆಂದು ತಿಳಿಯದೆ blank ಆಗಿದ್ದ ಮೆದುಳಿನ creative ಭಾಗ. ಅದಕ್ಕೆ ಈಗ ಜನ ದಿನಕ್ಕೆ ೫-೬ ಕತೆ ಯಾ ಕವನ or ವಾರಕ್ಕೊಂದು ಕಾದಂಬರಿ ( ನಮ್ಮ ತಲೆಮಾರಿನವರಾದ್ರೆ ದಿನಕ್ಕೆರಡು blog) ಬರಿತಿದ್ದೊರು ಯಾಕೆ sudden ಆಗಿ ಬರಿಯೊದು ನಿಲ್ಲಿಸಿ ಅಜ್ನಾತವಾಸಕ್ಕೆ ಹೊಗುತ್ತಾರೆ ಎಂಬ ಬಗ್ಗೆ ಬರೆಯೊಣ ಅಂತ ಮನಸು ಮಾಡಿದ್ದೇನೆ. ನನಗನ್ನಿಸಿದಂತೆ TOP 4 reasons for ಎನೂ ಬರೆಯದಿರೊದು
* ಸೋಮಾರಿತನ (ಯಾರು type ಮಾಡ್ತಾರೆ ಅನ್ನೋ ಉದಾಸೀನ)
* ಬರೆದೂ ಬರೆದೂ ನಮ್ಮ ಮೆದುಳು ಬರೆಯುವ ಬಗ್ಗೆ ಆಲೊಚಿಸಿದರೆ ಸಾಕು ಗರಂ ಆಗಿ loose control ಥರಾ ಅಡೊಕ್ಕೆ ಶುರು ಮಾಡೊತ್ತೆ.
* ಮೆದುಳಿನ creative ಭಾಗ ಒಂದು ಥರದ tank , ಎಲ್ಲಾ ideas ಒಂದು ಸಲ ಸೋರಿಹೋದರೆ ಮತ್ತೆ ತುಂಬಲು time ಬೇಕು.
* ಕೆಲಸ,ಕೆಲಸ ,ಕೆಲಸ
ನಿಮಗೂ ಬರಿಯದೆ ಇರೋದಕ್ಕೆ ಬೇರೆ ಎನಾದ್ರು Reason ಇದ್ರೆ ಸ್ವಲ್ಪ ಹಂಚಿಕೊಳ್ಳಿ.
ಅಂದ ಹಾಗೆ ರಾಘವೇಂದ್ರ ಖಾಸನೀಸ ಅನ್ನೊ ಕತೆಗಾರ ಕನ್ನಡದಲ್ಲಿ ಇದ್ದ್ದಾರೆ .ಅವರು ಸುಮಾರು 25 ವರ್ಷದಲ್ಲಿ ಬರೆದಿದ್ದು some 20 odd ಕತೆಗಳು.ಕೆಲವು ಸಾಹಿತಿಗಳು ತಿಂಗಳಿಗೆ 20 ಕತೆ/ಕವನ ಬರೆಯುತ್ತ್ತಾರೆ. ಆದ್ರೆ ಕನ್ನಡದ ಶ್ರೇಷ್ಟ ಕತೆಗಾರರ ನೆನಪು ಬಂದಾಗ ಖಾಸನೀಸರ ಹೆಸರು Top 3 ಪಟ್ಟಿಯಲ್ಲಿ ಬರುತ್ತದೆ