Sunday, August 14, 2011

3 ಸಾಲುಗಳು - ೫



ಊರಲ್ಲಿ ಜಡಿ ಮಳೆ,ಆಗ ಹೊಳೆದ ನವ್ಯ ಸಾಲುಗಳು








ಹೊರಗೆ ಹನಿಯುವ ಮಳೆ
ಕೈಯಲ್ಲಿ ಹಬೆಯಾಡುವ ಕಾಫಿ
ಆದರೂ ಸಿಗುತ್ತಿಲ್ಲ ನಿನ್ನಪ್ಪುಗೆಯ ಬಿಸಿ ನನಗೆ


ಪ್ರತಿ ಮಳೆಗೆ ಹೊಸ ಚಿಗುರೊಡೆದು
ಎಲ್ಲೆಡೆಯು ಹಸಿರೇ ಹಸಿರು
ನಿನ್ನ ಪ್ರೀತಿ ಮಳೆಯಿಂದಲೂ ಇದೇ ಫಲಿತಾಂಶ



ಬಿಸಿ ಚಹಾ, ಬಿಸಿ ಹಪ್ಪಳ
ಇದ್ಯಾಕೋ ಹೊಂದುತ್ತಿಲ್ಲ ಈ ಜಡಿ ಮಳೆಗೆ
ಬಿಸಿಯಪ್ಪುಗೆ ,ಬಿಸಿಯುಸಿರು,ಬಿಸಿ ಚುಂಬನ ಇಲ್ಲವೇ?