ಮೊನ್ನೆ MAY 11 ಮೈಸೂರಿನಲ್ಲಿ ಆಲಿಕಲ್ಲು ಮಳೆ ಬಂದಿತ್ತು...
ನಾನು ಎಲ್ಲಾ ಕೆಲಸ ಬಿಟ್ಟು ಆಲಿಕಲ್ಲು ಹೆಕ್ಕಲು ಓಡಿಹೊಗಿದ್ದೆ.ಮಳೆಯಲ್ಲಿ ಕೆಲವು ಕೊಲೀಗ್ಸ್ ಜೊತೆ ನೆನೆದೆ.ತುಂಬ ಜನ ಆಫೀಸ್ ಗಾಜಿಗೆ ಮುಖ ಒಡ್ಡಿ ನಿಂತಾಗ,ಮೊಬೈಲಿಗೆ,ಮೊಬೈಲಿನ ಕ್ಯಾಮರಕ್ಕೆ ಕೆಲಸ ಕೊಟ್ಟು ನಿಂತಾಗ ನಾನು ಆಲಿಕಲ್ಲು ಹೆಕ್ಕಲು ಓಡಿಹೊಗಿದ್ದು ತಮಾಷೆ ಎನ್ನಿಸಬಹುದು ...ನಾನು ೩ನೇ ಕ್ಲಾಸಿನಲ್ಲಿ ಇದ್ದಾಗ ಊರಲ್ಲಿ ಆಲಿಕಲ್ಲು ಮಳೆ ಬಂದಿತ್ತು...ಆವತ್ತೂ ನಾನು ನನ್ನ ತಮ್ಮನ ಜೊತೆ ಆಲಿಕಲ್ಲು ಹೆಕ್ಕಲು ಓಡಿಹೊಗಿದ್ದೆ..ಆ ದಿನ ಮನೆಯಲ್ಲಿ ಅಪ್ಪ ಕೋಲು ಮಿಠಾಯಿ (ಪೆಟ್ಟಿಗೆ ನನ್ನ ನಾಮಕರಣ)ಕೊಟ್ಟಿದ್ದರು..ಅದಕ್ಕೆ ಎನೋ ಆ ನೆನಪು.. ಅದರೆ ಆ ಸಂತಸ ಬೇರೆ ಯಾವುದರಲ್ಲು ಸಿಗುವುದಿಲ್ಲ...ಸಿಗಲಿಕ್ಕು ಸಾಧ್ಯ ಇಲ್ಲ್ಲ. ಮನುಷ್ಯ ಸಂತಸಕ್ಕಾಗಿ ಎಲ್ಲೆಲ್ಲೊ ಹುಡುಕುತ್ತಾನೆ ಆದರೆ ತನ್ನ ಸುತ್ತಮುತ್ತಲಿನ ಚಿಕ್ಕ ಚಿಕ್ಕವಿಷಯಗಳಲ್ಲಿ ಸಂತಸ ಹುಡುಕುವುದಿಲ್ಲ. ಆ ಚಿಕ್ಕ ಚಿಕ್ಕವಿಷಯಗಳಲ್ಲಿನ ಸಂತಸ ಧೀರ್ಘಕಾಲದ ತನಕ ಅವನ ನೆನಪಿನಲ್ಲಿ ಇರುತ್ತದೆ...
ಅದಕ್ಕೆ ತಾನೆ Ramona L. Anderson ಹೇಳಿರೋದು....
" People spend a lifetime
searching for happiness; looking for peace.
They chase idle dreams, addictions,
religions, even other people,
hoping to fill the emptiness that plagues them.
The irony is that
the only place they ever needed to search
was within themselves"
ಇದೆಲ್ಲ ಆಲಿಕಲ್ಲು ಮಳೆ ಬಂದು ನಿಂತ ಮೇಲೆ ಬಂದ ನೆನಪಿನ ಮಳೆ ಕೊಚ್ಚಿ ತಂದ ರಾಡಿ...ಸುಮ್ನೆ ಎನೋ ಬರಿಯೋಣ ಅಂತ ಅನ್ನಿಸ್ತು ಬರೆದೆ.
1 comment:
ನೆನಪಿನಂಗಳದಲ್ಲಿ ನಿಂತು ಸಂತೋಷದ ಮಳೆಯಲ್ಲಿ ನೆನೆದು ಒಂದು ಪುಟ್ಟ ಆದರೆ ಅಮೂಲ್ಯ ಸಂತೋಷವನ್ನು ನಿಮ್ಮದಾಗಿಸಿಕೊಂಡಿರುವುದಕ್ಕೆ ಅಭಿನಂದನೆಗಳು.
Post a Comment