Monday, June 04, 2007

ಹಾಗೆ ಸುಮ್ಮನೆ ಓದಿದೆ

ಮೊನ್ನೆ ಊರಿಗೆ ಹೋಗಿದ್ದಾಗ ಕನ್ನಡದ ಮೃಗಯ (ಬೇಟೆ) ಸಾಹಿತ್ಯ ಒದೋ ಅವಕಾಶ ಸಿಕ್ತು .
ಬಹಳ ದಿನಗಳ ನಂತರ ನನ್ನ favorite ಅತ್ರಿ ಬುಕ್ ಹೌಸ್ (ಗೊತ್ತಿಲ್ಲದವರಿಗೆ : ಅತ್ರಿ ಬುಕ್ ಹೌಸ್ , ಬಲ್ಮಠ, ಮಂಗಳೂರು)ಗೆ ಹೋಗಿದ್ದೆ.
ಅಲ್ಲಿ ನಾನು ಬಹಳ ದಿನದಿಂದ ಹುಡುಕುತ್ತಿದ್ದ ಪುಸ್ತಕ ಸಿಕ್ಕಿತು : "ಬೇಟೆಯ ನೆನಪುಗಳು" - ಕೆದಂಬಾಡಿ ಜತ್ತಪ್ಪ ರೈ .
ಜೊತೆಗೆ ಪ್ರಭಾಕರ ಶಿಶಿಲ ಬರೆದ "ಸದ್ದಡಗಿದ ಶಿಕಾರಿ ಕೋವಿ- ಬಡ್ಡಡ್ಕ ಅಪ್ಪಯ್ಯ ಗೌಡರ ಅನುಭವಗಳು" ಸಿಕ್ಕಿತು .
ನಾನು ಎರಡು ವರ್ಷ ಹಿಂದೆ ಪುತ್ತೂರಿನ ರದ್ದಿ ಅಂಗಡಿಯಲ್ಲಿ "ಬೇಟೆಯ ದಿನಗಳು" -ಕೈಂತಜೆ ವಿಷ್ಣು ಭಟ್ಟ ಖರೀದಿಸಿದ್ದೆ. ಓದಿದ್ದೆ.
ಮೊನ್ನೆ ಊರಲ್ಲಿ ಕೂತು ಒಂದು ಗುಕ್ಕಿನಲ್ಲಿ ಈ 3 ಪುಸ್ತಕ ಓದಿದೆ....
ಇವನ್ನೆಲ್ಲಾ ಮುಗಿಸಿ "ಮಲೆಗಳಲ್ಲಿ ಮದುಮಗಳು" ಮುಗಿಸಿದೆ.
ಅದಾದ ಕೂಡಲೆ ವಿಠ್ಠಲ ವೆಂಕಟೇಶ ಕಾಮತ್ "ಇಡ್ಲಿ ಒರ್ಕಿಡ್ ಮತ್ತು ಆತ್ಮಬಲ"ದ ಬಗ್ಗೆ ಹೇಳುತ್ತಿದ್ದರು.
ಜಿ.ಎಸ್.ಸದಾಶಿವರವರು ಅವರ "ಇದುವರೆಗಿನ ಸಮಗ್ರ ಕಥೆಗಳು" ಹೇಳುತ್ತಿದ್ದರು.
ನಾ.ಡಿಸೋಜಾ ರ ಹೊಸ ಕಥಾ ಸಂಕಲನ "ಗಿಳಿಯೇ ಓ ಗಿಳಿಯೇ" ಓದಿದೆ.
ಭಾಸ್ಕರ ಹೆಗ್ಡೆ "ಸುನಿತಾಗೆ ಮಲ್ಲಿಗೆ ಅಂದ್ರೆ ಇಷ್ಟ " ಅಂತ ಬರ್ದಿದ್ರು ,ಓದಿದೆ.
ಮನೆಯಲ್ಲಿ ಒಂದು ವಾರ ಕೂತು ಪರೀಕ್ಷೆಗೆ ಓದುವಂತೆ ಪುಸ್ತಕ ಓದಿದೆ.
ನಾನು ಒಂದು ಕೈಯಲ್ಲಿ ಮಾವಿನ ಹಣ್ಣು ಹಿಡಿದು ಒಂದು ಕೈಲಿ ಪುಸ್ತಕ ಹಿಡಿದು ಓದುವುದು ನೋಡಿ ಅಮ್ಮ "ಈ ತರ ಎಲ್ಲಾದ್ರು SSLC ಪರೀಕ್ಷೆಗೆ ಓದಿದ್ರೆ ನಿಂಗೆ first rank ಬತ್ತಿತ್ತು " ಅಂದ್ರು.

ಆದ್ರೂ office ಗೆ ರಜೆ ಹಾಕಿ ಮನೆಲಿ ಕೂತು ಪುಸ್ತಕ ಓದುವುದರಲ್ಲಿ ಒಂಥರಾ ಮಜಾ ಇದೆ... ಏನನ್ತೀರಾ?

ಅಂದ ಹಾಗೆ ಯಾರಾದ್ರು ಕೆದಂಬಾಡಿ ಜತ್ತಪ್ಪ ರೈ ಯವರ ಬೇಟೆಯ ನೆನಪು ಪುಸ್ತಕದ online ಆವೃತ್ತಿ ಓದಬೇಕು ಅಂತಿದ್ದರೆ
ಇಲ್ಲಿಗೆ ಹೋಗಿ

4 comments:

ನಂದಕಿಶೋರ said...

ನಮಸ್ಕಾರಣ್ಣಾ...

ನಿಂಕುಳು ಪುಸ್ತಕದ ಓದುಣೆಟ್ಟ್ ಈತ್ ಉಷಾರು ಉಳ್ಳರಂತ್ ಗೊತ್ತೇ ಇತ್ರಿ. ಎಡ್ಡೆಡ್ಡೆ ಪುಸ್ತಕಂತ ಲಿಸ್ಟ್ ಕೊಳ್ನೇಕ್ ಉಪಕಾರ ಸ್ಮರಣೆ. ಕಂಪೆನಿಡ್‍ಲಾ ನಿಂಕುಳ್ನ ಬ್ಲಾಗ್ ಸೂಯೆ, ಲಾಯಿಕುಂಡು. ಬರೆಯೊಂತಿಪ್ಲೆ.

ಸಿಂಧು sindhu said...

ಸನತ್,

ಆಫೀಸಿಗೆ ರಜೆ ಹಾಕಿ, ಮನೆಯಲ್ಲಿ ಕೂತು ಪುಸ್ತಕ ಓದುವಲ್ಲಿ ಸಿಕ್ಕಾಪಟ್ಟೆ ಮಜಾ ಇದೆ.. ಮರು ಮಾತಿಲ್ಲ. ಒಂದು ಕೈಯಲ್ಲಿ ಪುಸ್ತಕ ಇನ್ನೊಂದು ಕೈಯಲಿ ತಿನ್ನಲು ಅಮ್ಮ ಕೊಟ್ಟ ತಿಂಡಿ/ಹಣ್ಣು ಇದ್ದರಂತೂ ಕೇಳುವುದೇ ಬೇಡ. ಇಷ್ಟರ ಮೇಲೆ ಊರಿನ ಹಿತವಾದ ವಾತಾವರಣದಲ್ಲಿ ಕೂತು... ಏನು ಹೇಳುವುದು ಏನು ಬಿಡುವುದು..
ಈ ಮಜಾ ಅನುಭವಿಸಿ, ಕೆಲವು ಅಪರೂಪದ ಪುಸ್ತಕಗಳನ್ನು ನೆನಪಿಸಿದ್ದಕ್ಕೆ, ತೋರಿಸಿದ್ದಕ್ಕೆ ಧನ್ಯವಾದ.

ಪ್ರೀತಿಯಿರಲಿ,
ಸಿಂಧು

ಅನಿಕೇತನ said...

Sanath,
Online link you provided is not opening... is there any other place where i can down load the same ...
It was really , nostalgic, the total scene u provided in this post.
Good post Sanath.

ಚೆ೦ಬಾರ್ಪು said...

ನಿಮ್ಮ ಬರಹ ಚೆನ್ನಾಗಿತ್ತು.

ನಾನೂ 'ಬೇಟೆಯ ನೆನಪುಗಳು'ಪುಸ್ತಕವನ್ನು ಎರಡೆರಡು ಬಾರಿ ಓದಿದ್ದೇನೆ. ಮೈ ನವಿರೇಲಿಸುವ ಘಟನಾವಳಿಗಳೊಳಗೆ ಕಳೆದು ಹೋಗುವುದರಲ್ಲಿ ತು೦ಬಾ ಮಜ ಇದೆ :)

ಕೈ೦ತಜೆ ವಿಷ್ಣು ಭಟ್ಟರ "ಬೇಟೆಯ ದಿನಗಳು" ಪುಸ್ತಕದ ಬಗ್ಗೆ ಕೇಳಿದ್ದೇನೆ. ಅದು ಎಲ್ಲಾದರೂ ಸಿಗಬಹುದೆ? ಹಾಗೆಯೇ ಪ್ರಭಾಕರ ಶಿಶಿಲ ಬರೆದ "ಸದ್ದಡಗಿದ ಶಿಕಾರಿ ಕೋವಿ- ಬಡ್ಡಡ್ಕ ಅಪ್ಪಯ್ಯ ಗೌಡರ ಅನುಭವಗಳು" ಎಲ್ಲಾದರೂ ಸಿಗುವ೦ತಿದ್ದರೆ ತಿಳಿಸಿ
ಧನ್ಯವಾದಗಳು