Tuesday, July 10, 2007

ಉತ್ತರಕನ್ನಡ ಜಿಲ್ಲೆಯು..ಶಿರಸಿ ಪೇಟೆಯು...ಅದರ ಜೀವನಾಡಿಯು

ಶಿರಸಿ - ನನ್ನ ಕಣ್ಣಿಗೆ ಕಂಡಂತೆ

ಕಳೆದ ವಾರಾಂತ್ಯ ಉತ್ತರಕನ್ನಡದ ಶಿರಸಿಗೆ ಹೋಗಿದ್ದೆ.ಶಿರಸಿ ಕರ್ನಾಟಕದ ಆಡಿಕೆ ಕೇಂದ್ರಗಳಲ್ಲಿ ಒಂದು.ಇಲ್ಲಿಯ ಜನರದ್ದು ಅಡಿಕೆ centered economy.ಅಡಿಕೆಗೆ ರೇಟ್ ಇದ್ರೆ ವ್ಯಾಪಾರ ವಹಿವಾಟು ಜೋರು,ಅದೇ ಅಡಿಕೆಗೆ ರೇಟ್ ಕಮ್ಮಿಅದ್ರೆ ವ್ಯಾಪಾರ ವಹಿವಾಟು ಥಂಡಾ. ಅಂದ ಹಾಗೆ ಉತ್ತರ ಪ್ರದೇಶದ ಮೊರಾದಬಾದ್ ಜಿಲ್ಲೆಯಲ್ಲಿ ಒಂದು ಸಿರ್ಸಿ ಅಂತ ನಗರ ಇದೆ.ಶಿರಸಿ ಸುತ್ತ ಹಸಿರನ್ನು ಹೊತ್ತು ನಿಂತಿರುವ ತಾಲೂಕು ಕೇಂದ್ರ. 'ಅಚ್ಚ ಕನ್ನಡ'ದಲ್ಲಿ ಹೇಳೋದಾದ್ರೆ ಮಲೆನಾಡಲ್ಲಿರುವ one of the sleepy town.ವರ್ಷದಲ್ಲಿ ಆರು ತಿಂಗಳು ಧಾರಾಕಾರ ಮಳೆ ಸುರಿದು,ಇನ್ನಾರು ತಿಂಗಳನ್ನ ಚಳಿಗಾಲ ಮತ್ತು ಬೇಸಿಗೆ ಹಂಚಿಕೊಂಡಿವೆ.ಮಲೆನಾಡಿನಲ್ಲಿ ಹೆದ್ದಾರಿಗಳಿಗಿಂತ ದೂರದಲ್ಲಿ ಗುಡ್ಡ ಕಾಡುಗಳ ನಡುವೆ ಇರುವ 5-6 ಮನೆಗಳಿರುವ ಹಳ್ಳಿಗಳೇ ಇರುವುದು.(ಈ ಮನೆ/ಹಳ್ಳಿಗಳಿಗೆ ಹೋಗುವುದೇ ಒಂದು ಟ್ರೆಕ್ಕಿಂಗ್ ಅಂತ ಬೆಂಗಳೂರಿಗರ ಹೇಳಿಕೆ.)ಆದರೆ ಇದೇ ಹಳ್ಳಿಗಳನ್ನ ,ಕಾಡು ಮೇಡು ,ಗುಡ್ಡ ಗದ್ದೆಗಳನ್ನ ಪೇಟೆಗೆ ಸಂಪರ್ಕಿಸುವ ಜೀವನಾಡಿಯೊಂದಿದೆ...ಆ ಜೀವನಾಡಿಯ ಹೆಸರೇ "ಬಜಾಜ್ M-80".

ಮನೆಗೆ ಒಂದು ಗಾಡಿ ಬೇಕು ಅಂದರೆ ಅದಕ್ಕೆ ಕೆಲವು criterion ಗಳು specific ಆಗಿ ಇರಬೇಕಾಗುತ್ತದೆ.
ತೀರಾ software ಭಾಷೆಯಲ್ಲಿ ಹೇಳೋದಾದ್ರೆ ಕೆಲವು requirement ಗಳು ಇರುತ್ತವೆ.
" ಹಿಂಡಿ,ಬೈಹುಲ್ಲು ,ಗ್ಯಾಸ್ ತರೊಕೆ ..., ಸೊಸೈಟಿಗೆ ಅಡಿಕೆ ,ಹಾಲು ತಗೊಂಡ್ ಹೊಪಲೆ..."
.. ಹೀಗೆ ಪೇಟೆಗೆ ಅಡಿಕೆ ಚೀಲ ತಗೊಂಡು ಹೋಗೋಕೆ, ಹಾಲು ಸೊಸೈಟಿ/KMFಗೆ ಹಾಲು ಒಯ್ಯಲಿಕ್ಕೆ...,ಮನೆಗೆ ದಿನಸಿ ,ಅಡುಗೆ ಗ್ಯಾಸ್ ತರುವುದಕ್ಕೆ, ಹಿಂಡಿ ತರುವುದಕ್ಕೆ.., ಹೀಗೆ ಎಲ್ಲಾದಕ್ಕೂ ಬೇಕಾದದ್ದು ಗಾಡಿ,ಕಲ್ಲು ಮಣ್ಣು,ಗದ್ದೆ ಗುಡ್ಡದ ದಾರಿಯಲ್ಲಿ ಸಂಚರಿಸಿದರೂ spare partಗಳು ಸಡಿಲಗೊಳ್ಳದಿರೋ ಗಾಡಿ,
ಎಲ್ಲ ಬೇಡಿಕೆಗಳನ್ನು ತೀರಿಸುವುದು ಒಂದೇ ಗಾಡಿ ..."ಬಜಾಜ್ M-80",ಒಂಥರಾ ಮಲೆನಾಡಿಗೆ ಹೇಳಿಮಾಡಿಸಿದ ಗಾಡಿ.
ಬೇಕಿದ್ರೆ ಶಿರಸಿಗೆ ಹೋಗಿ ಅಥವಾ ಉತ್ತರ ಕನ್ನಡದ ಯಾವುದೇ ಪೇಟೆಗೆ ಹೋಗಿ ನಿಂತ್ರೆ ನಿಮಗೆ minimum ನಿಮಿಷಕ್ಕೊಂದು "ಬಜಾಜ್ M-80" ಕಾಣಸಿಗುತ್ತದೆ. ಈಗ ಬೇರೆ ಬೇರೆ ಉತ್ತಮ ಗಾಡಿಗಳು ಬಂದರೂ M-80 ಮಾತ್ರ ಅದರ ರಾಜ ಮರ್ಯಾದೆಯ ಸ್ಥಾನ ಬಿಟ್ಟುಕೊಟ್ಟಿಲ್ಲ.
ನಾನು ಹೀಗೆ ಮಾತನಾಡುತ್ತ ಗಾಡಿಗಳ ಬಗ್ಗೆ ಕೇಳಿದಾಗ "ತಮ್ಮಾ..ಆನು 12 ವರ್ಷದಿಂದ ಈ ಗಾಡಿ ಹೊಡೀತಾ ಇದ್ದೆ.. ಎನೂ ತೊಂದ್ರೆ ಕೊಟ್ಟಿದಿಲ್ಲೆ.." ಅಂತಾ M-80 ಹೊಗಳುವ ಹಿರಿಯರು ಬಹಳ ಜನ ಸಿಕ್ಕಿದರು.
ಯಾಕೋ ರೋಹಿತನಹತ್ರ ಕೇಳಿದರೆ "ಯಜಮಾನ್ರೇ..ಈ world ಅಲ್ಲಿ highest number of M-80 ಇರೋದೇ ಉತ್ತರ ಕನ್ನಡದಲ್ಲಿ, ವಿಶ್ವದಲ್ಲಿ ಅತ್ಯಂತ ಹೆಚ್ಚು M-80 ಇರೋ ಗಿನ್ನಿಸ್ ರೆಕಾರ್ಡ್ ನಮ್ಮದೇ .ಬೇಕಾದ್ರೆ ನೋಡಿ ಬೆಂಗಳೂರಿಗೆ ಇಲ್ಲಾಂದ್ರೆ ಉತ್ತರ ಕನ್ನಡದ ಹೊರಗೆ ಬೇರೆ ಯಾವುದಾದರು ಊರಿಗೆ ಹೋಗಿ ಅಲ್ಲಿ ಎಲ್ಲಾದ್ರು M-80 ಕಂಡ್ರೆ ಅದರ number ನೋಡಿ KA-31 ..ಅಂತಾ ಸ್ಟಾರ್ಟ್ ಆಗೊತ್ತೆ" ಅಂತ ಹೇಳಿದ.
ಅವಾಗ ನಾನು ಯೋಚನೆಗೆ ಬಿದ್ದೆ, ಬಜಾಜ್ ಕಂಪನಿಯವರು ಬೇರೆ ಕಡೆ M-80 manufacture ಯಾಕೆ ಮಾಡಬೇಕು.ಸುಮ್ನೆ ಶಿರಸಿಲೋ ಇಲ್ಲಾಂದ್ರೆ ಉತ್ತರಕನ್ನಡದಲ್ಲಿ ಎಲ್ಲಾದ್ರು M-80 manufacture ಮಾಡಿದ್ರೆ ಅವರ transport cost ಕಮ್ಮಿ ಆಗೊಲ್ವ. ಭಾರತದಲ್ಲಿ ತಯಾರಾಗೋ 40% M-80 ಉತ್ತರಕನ್ನಡದಲ್ಲಿ ಸೇಲ್ ಆದರೂ ಸಾಕು ತಾನೇ ಅವರ ಖರ್ಚು ಕಮ್ಮಿ ಮಾಡೋಕೆ .ಬೇರೆ ಕಡೆಯಿಂದ order ಬಂದ್ರೆ ಇಲ್ಲಿಂದ ಕಳಿಸಿದ್ರಾಯಿತು ಅಂತ ಯೋಚಿಸುತ್ತಿದ್ದೆ. ಆಗ ನನಗೆ ಅನ್ನಿಸಿತು ನಾವು software ಜನ ಯಾವುದಕ್ಕೆ ಬೇಕೋ ಅದಕ್ಕೆ ಬಿಟ್ಟು ಎಲ್ಲಾದಕ್ಕೂ logic ಹಾಕ್ತಾರೆ.


ಆದ್ರೆ ಎನೇ ಹೇಳಿ ಶಿರಸಿಯ ಜನರನ್ನು ಮಾತ್ರ ಮೆಚ್ಚಬೇಕು.ರಸ್ತೆ ಇರುವುದು ಪಾದಾಚಾರಿಗಳ ಓಡಾಟಕ್ಕೆ ಅಂತ ಅವರು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.
ಯಾಕೋ ಶಿರಸಿಯಲ್ಲಿ drive ಮಾಡಬೇಕಿದ್ರೆ ಜನ ರಸ್ತೆಯಲ್ಲಿ ಇದ್ದಾರೆ ಅಂತ ನೀವು ಹಾರ್ನ್ ಬಾರಿಸಿದ್ರೋ ಅದು ನಿಮ್ಮ ಗ್ರಹಚಾರ . ನೀವು ನಿಂತು ಹತ್ತು ಹನ್ನೆರಡು ಹಾರ್ನ್ ಬಾರಿಸುತ್ತಿದ್ದರೂ ಜನ ಮಾತ್ರ ಎನೂ ಅಗಿಲ್ಲ ಅನ್ನುವ ಹಾಗೆ"ಅಲ್ದಾ ಭಾವ, ಮೊನ್ನೆ ಯಂತಾ ಮಳೆ.." ಅಂತಾ ತಮ್ಮ ಪಟ್ಟಾಂಗ ಮುಂದುವರಿಸುತ್ತಾ ತಮ್ಮ ಪಾಡಿಗೆ ಎನೂ ಅಗಿಲ್ಲ ಅನ್ನೋ ತರಹ ಮುನ್ನಡೆಯುತ್ತಾರೆ.
ಶಿರಸಿ ಗೆ ಕಾಲಿಟ್ಟ ಕ್ಷಣದಿಂದ ಯಾಕೋ ಪುತ್ತೂರು ನೆನಪಾಗ ತೊಡಗಿತ್ತು.ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ರಸ್ತೆಗೆ ಆಂಟಿಕೊಂದಿರುವ ಅಂಗಡಿಗಳು (correct ಆಗಿ ಹೇಳೂದಾದ್ರೆ ಅಂಗಡಿಗಳಿಗೆ ಅಂಟಿಕೊಂಡಿರುವ ಕಿರಿದಾದ ರಸ್ತೆಗಳು), ಆ ಪೇಟೆಯಲ್ಲಿ ಗಾಡಿ ಓಡಿಸಲು ಮಾಡಬೇಕಾದ ಹೋರಾಟಗಳು...
ಎನೋಪ್ಪಾ ಕುಮಾರಣ್ಣ ಮೊನ್ನೆ ಶಿರಸಿಗೆ ಬಂದಿದ್ದಾಗ ಶಿರಸಿ ಜಿಲ್ಲೆ ಮಾಡುವುದಾಗಿ ಹೇಳಿದ್ದಾರಂತೆ. ಸುಮ್ನೆ ಜಿಲ್ಲೆ ಮಾಡೋ ಬದಲು ಜನರಿಗೆ ಅಲ್ಲಿ ಎನು ಮೂಲಭೂತ ಅಗತ್ಯಗಳು ಬೇಕಾಗಿದೆಯೋ ಅದು ಮಾಡಿಕೋಡಿ ಸಾಕು.
ನೀವು ಜಿಲ್ಲೆ ಮಾಡಿ ಮಾಡದೇ ಇರಿ ..ಅದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ..ಶಿರಸಿ ಪೇಟೆಯಲ್ಲಿ ..M-80 ಗಳು ಮಾತ್ರ ತಮ್ಮ ಪಾಡಿಗೆ ತಾವು ಓಡಾಡಿಕೊಂಡಿರುತ್ತವೆ,ರಸ್ತೆಯಲ್ಲಿ ನಡೆಯುತ್ತಿರುವ ಪಾದಾಚಾರಿಗಳು ಅವಕ್ಕೆ ದಾರಿ ಕೊಟ್ರೂ..ಕೊಡದಿದ್ದರೂ...

9 comments:

Anonymous said...

onde M- 80 du 10 pictures haaki, sirsili M-80 maatra irodu antheeralla?
ondina sirsili odaadkondu bardirodu antha yaargadru gottagutthe. nim kannige yavagloo negatives ashte kaansoda???

Sanath said...

@Anonymous,
ಗುರುವೇ ನಾನು ಶಿರಸಿಯ ನೆಗೆಟಿವ್ point M-80 ಅಂತಾ ಯಾವತ್ತು ಹೇಳಿಲ್ಲ.M-80 ಮಲೆನಾಡಿನ ಜೀವನಾಡಿ ಅಂತ ಬರೆದೆನೆ ಹೊರತು,ಅಲ್ಲಿ ಬೇರೆ ಗಾಡಿಗಳೇ ಇಲ್ಲ ಅಂತ ಬರೆದಿಲ್ಲ.
ಇದು ಉತ್ತರ ಕನ್ನಡದ ಹೆಮ್ಮೆ ಆಗಿರಬೇಕು.ಒಂಥರಾ identity ತರಹ..ಮೈಸೂರು ಅಂದ್ರೆ ಅರಮನೆ,KRS ನೆನಪಿಗೆ ಬಂದ ಹಾಗೆ ಉತ್ತರಕನ್ನಡ ಅಂದ ಕೂಡಲೆ ನಂಗೆ ಯಾಣ, ಹಸಿರು,ಬೀಚ್,M-80 ನೆನಪಿಗೆ ಬರುತ್ತೆ.ಅದಕ್ಕೆ ಬರೆದನೇ ಹೊರತು ಶಿರಸಿಯನ್ನ ಕೆಟ್ಟದಾಗಿ ತೋರಿಸೋಕೆ ಅಲ್ಲ
ಬೇಜಾರಾಗಿದ್ರೆ ಕ್ಷಮೆ ಇರಲಿ,
ಸನತ್

ಅನಿಕೇತನ said...

ಗುರುಗಳೆ,
ನಟರಾಜ ರೋಡಿನಲ್ಲಿ ನಟರಾಜ ಸರ್ವೀಸನ ( ಬಸ್ಸ್- ನಂ 11 ) ಸಾರ್ವಭೌಮತ್ವದ ಅರಿವು ಆಗುವುದು ಸಹಜ.
ಚೆನ್ನಾಗಿದೆ.
ಆ ರೋಡಿನಲ್ಲಿ ಗಾಡಿ ಓಡಿಸುವ ಸ್ಕಿಲ್ಲು ಸಿರ್ಸಿಯವರಿಗೆ ಕರತಲಾಮಲಕ !

Pranesh said...

Good one dude..... BTW Sirsinalli yen maadta idde!!!!

Anonymous said...

Gurugale chennagittu. adre Tamma Grama Vastvyada anubhava galanna hancikondidre inno chennagirodu..

ಚಿನ್ಮಯ said...

About M-80 you are hundred% correct. My father also has one which is running from 18 years!!
About sleeping city….no way.
Believe me it is one of those power centric ever happening city. I feel it is faster than a certain Mysore.
Go check out discount sales if “adike rate” is good.
Chinnada bele “vanilla” rate bandre yellara maneyallu “nammane Maruti caru”
Eega sadyakke “nammane caru marti”

Sanath said...

@chinmay

Chinnada bele “vanilla” rate bandre yellara maneyallu “nammane Maruti caru”
Eega sadyakke “nammane caru marti”

ha hA..what a anagram ...

chaitra said...

ಹೌದು ...’ಎಂ-೮೦’ ಶಿರಸಿಯಲ್ಲಿ ಮಾತ್ರ ಅಲ್ಲ.... ಮಲೆನಾಡಿನ ಹೆಚ್ಚಿನ ಸ್ಠಳಗಳಲ್ಲಿರುವ ಬಹು ಉಪಯೋಗಿ ವೆಹಿಕಲ್..
’ಜೇವನಾಡಿ’ ಯೆನ್ನುವದು.... ಎಂ-೮೦ ಜನಪ್ರಿಯತೆಗೆ... ಒಂದು ಪ್ಲಸ್ ಪೌಯಿಂಟ್...
ಈಗ ಶಿರಸಿ ಯಲ್ಲಿ ಮಳೆ ಜಾಸ್ತಿ... ಡಿಸ್ಕೌಂಟ್ ..ಸೀಸನ್..ಬೇರೆ... ಹೋಪ...ಬಪ್ಪ.. ಜನ, ವಾಹನ ಎಲ್ಲ ಜಾಸ್ತಿನೇ... ಎಲ್ಲರೂ... ಅದೇ ರಸ್ತೆಯಲ್ಲೆ ಓಡಾಡಬೇಕು... ಹಂಗಾಗಿ..ಶಿರಸಿ ರಸ್ತೆಗಳು ಮತ್ತಷ್ಟು ಕಿರಿದಾಗಿ,ಜನರಿಂದ, ಎಂ-೮೦ ವಾಹನ ಗಳಿಂದ.. ಕಿಕ್ಕಿರಿದು..ತುಂಬಿದ ಹಾಗೆ ಕಂಡರೆ ಆಶ್ಚರ್ಯ..ಇಲ್ಲ................

ವಿ.ರಾ.ಹೆ. said...

ಸಕತ್ತಾಗಿ ಬರ್ದಿದೀರಾ ನಮ್ಮೂರ ಬಗ್ಗೆ. M-80 ಗಾಡಿ ನಿಜ್ವಾಗ್ಲೂ ಅಲ್ಲಿನ ಜೀವನಕ್ಕೆ ಹೇಳಿ ಮಾಡಿಸಿದಂತಿದೆ.
ದೊಡ್ಡ ಊರುಗಳನ್ನು ಬಿಟ್ಟು ಹೆಚ್ಚು ಕಮ್ಮಿ ಎಲ್ಲಾ ಊರುಗಳಲ್ಲೂ ಜನ ರಸ್ತೆ ಮೇಲೆ ಓಡಾಡೋದು ಬಿಡಿ. ಯಾಕಂದ್ರೆ ಅವ್ರಿಗೆ ಅಲ್ಲಿ ಫುಟ್ ಪಾತ್ ಇರೋಲ್ವಲ್ಲಾ.