18 june 2007
"ಯಜಮಾನ್ರೆ ನಮ್ಮ ಮಾವನ ಮನೆಯಲ್ಲಿ double function ಇದೆ. ಜುಲೈ 9 ರಜೆ ಹಾಕಿ ಬಂದು ಬಿಡಿ..ಇನ್ನೂ ಹದಿನೈದು ದಿನ ಇದೆ ರಜಾ apply ಮಾಡಿಬಿಡಿ"
"ಅಲ್ಲಾ..ಅದು ರೋಹಿತಣ್ಣ..ಕೆಲ್ಸ ತುಂಬಾ"
"ಬನ್ನಿ ಸಾರ್ ..ನಿಮ್ಮ ಅತ್ತಿಗೆ ತಂಗಿಯರ ಮದುವೆ ಒಂದು ಜುಲೈ8ಕ್ಕೆ,ಇನ್ನೊಂದು 9ಕ್ಕೆ,ಬರದಿದ್ದರೆ ನಿಮಗೆ ಕಷ್ಟ..ನೋಡಿ"
"ಅಲ್ಲಾ ...ಕೆಲಸ..."
"ಕೆಲಸಕ್ಕೇನು ಸಾರ್ ..ಇಲ್ಲಿ ಬನ್ನಿ ಮದುವೆ ಮನೆಯಲ್ಲಿ ಬೇಕಾದಷ್ಟು ಕೆಲಸ ಇದೆ,ಪಂಕ್ತಿಯಲ್ಲಿ ಬಡಿಸೋದು,cameraದವನಿಗೆ ಹೇಳಿಲ್ಲಾ ನೀವು ಬಂದ್ರೆ ಫೊಟೋ ತೆಗೀಬಹುದು ..official cameraman ಆಗಿ...ಬನ್ನಿ ಸಾರ್ ....ನಿಮಗೆ ಸ್ವಲ್ಪ ಉತ್ತರ ಕನ್ನಡದ ಹಸಿರು ತೋರಿಸೋಣ"
"ಆಲ್ಲೇನಿದೆ..ಕಾಡು ಬೆಟ್ಟ ಗುಡ್ಡ ಗದ್ದೆ, M-80 ,ದಕ್ಷಿಣ ಕನ್ನಡದ ಮಲೆನಾಡಿನವರಿಗೆ ನೀವೇನು ಹಸಿರು ತೋರಿಸೋದು ,ಅದೇ ಹಸಿರು ,ಅದೇ ಪಾಚಿ,ಅದೇ ಜುಲೈ ತಿಂಗಳ ಮಳೆ ಭೋರೋ ಅಂತ ಸುರಿತಾ ಇರೊತ್ತೆ."
"ಅಲ್ಲಾ ನಮಗೆ ಗೊತ್ತು ರೀ..ನೀವು carrot ಇಲ್ಲದೇ ಬರೊಲ್ಲಾ ಅಂತ"
"carrot ಬೇಡ...ಬೀಟ್ರೂಟು ಬೇಡಾ"
"ಗುರುವೇ ..ನೋಡಿ ರಜೆ ಹಾಕಿ ಬಂದ್ರೆ ...."
ಈ ರೀತಿ ನನಗೆ ರೋಹಿತನ ಕಡೆಯಿಂದ invitation ಬಂದಿದ್ದು.ಕಳೆದ ನಾಲ್ಕುವರೆ ವರ್ಷದಿಂದ ದುಬೈಯಲ್ಲಿ ಇರುವ ಅಣ್ಣಾವ್ರು ..ಬನ್ನಿ ಅಂತಿದಾರೆ ಹೋಗದೇ ಇದ್ರೆ ಪಾಪ ಬೇಜಾರು ಮಾಡ್ಕೊತಾರೆ ಅಂತ ಒಂದು ದಿನ ರಜಾ ಹಾಕಿ ಶಿರಸಿಗೆ ಹೊರಡೋ plan ಹಾಕಿದೆ.
ಮ್ ಮ್ ಬನ್ಸ್..
8,9 july 2007
"ಇವ ಸನತ್ ಹೇಳಿ,ಪುತ್ತೂರಿಲಿ ನಂಗೆಲ್ಲ ಒಂದೇ ವಠಾರಲ್ಲಿ ಇದ್ದದ್ದು. ಈಗ ಮೈಸೂರಿಲಿ soft engg.ಮದುವೆಗೆ ಬಾ ನಿಂಗೆ ಸ್ವಲ್ಪ ಉತ್ತರಕನ್ನಡದ ಸೌಂದರ್ಯ ತೋರಿಸ್ತೆ ಹೇಳಿದೆ ಅದಕ್ಕಾಗಿ 'ಪಕ್ಷಿ ವೀಕ್ಷಣೆ'ಗೆ ಬಯಿಂದ."( ಈ ರೀತಿ ನನ್ನನ್ನ ಎಲ್ಲರಿಗೂ ಪರಿಚಯಿಸಿದಕ್ಕೆ ರೋಹಿತಣ್ಣಂಗೆ ಅನಂತಾನಂತ ಧನ್ಯವಾದಗಳು.
ಸ್ವಗತ: ಮೈಸೂರಿಂದ ನೀನು ಕರೆದೆ ಅಂತ ಬಂದ್ರೆ ಈ ಸನ್ಮಾನನ..ಗುರು ಯಾವಾಗಾದ್ರು ನನ್ನ ಕೈಗೆ ಸರಿಯಾಗಿ ಸಿಕ್ಕು ...ನಿನ್ನ ನೋಡ್ಕೋಳ್ತೀನಿ..)
ಪುಣ್ಯಾತ್ಮ ಯಾವಾಗ "ಪಕ್ಷಿ ವೀಕ್ಷಣೆಗೆ ಬಯಿಂದ" ಅಂತ ಉಲಿದನೋ ಅದೇ ಕೊನೆ ಆ ಶಬ್ಧ ಕೇಳೀದನೇ ಹೊರತು "ಪಕ್ಷಿ ವೀಕ್ಷಣೆ" ಆಗಲೇ ಇಲ್ಲ. ಅವನನ್ನ ಕೇಳಿಬಿಟ್ಟೆ
"ಗುರುಗಳೇ ..ಪಕ್ಷಿ ವೀಕ್ಷಣೆಗೆ ಬಯಿಂದ..ಪಕ್ಷಿ ವೀಕ್ಷಣೆಗೆ ಬಯಿಂದ...ಅಂತೀರಲ್ಲಾ ಇಲ್ಲಿ ಪಕ್ಷಿ ತೋರಿಸಿ ...ಬರೀ ಮುದಿಹದ್ದು ಗಳೇ ಇರುವುದು", ಆದಕ್ಕೆ ಉತ್ತರ ಬಂದಿದ್ದು,
"sorry..ಸಾರ್ ...ಅತಿವೃಷ್ಟಿಯಿಂದ ಪಕ್ಷಿಗಳು ಗೂಡಿನಿಂದ ಹೊರಗೆ ಬರಲಿಲ್ಲ ಅಂತ ಕಾಣೋತ್ತೆ."
ನಾನು ಮೊದಲು ಯಾವಾಗಲೋ "ಓ...ಮನಸೇ"ಯಲ್ಲಿ ಉತ್ತರ ಕನ್ನಡದಲ್ಲಿ ಕೂಸುಗಳ ಬರದ ಬಗ್ಗೆ ಓದಿದ್ದೆ.ಆದರೆ ಪರಿಸ್ಥಿತಿಯ ಗಂಭೀರತೆ ಅರ್ಥ ಆಗಿದ್ದೆ ಮೊನ್ನೆ ಶಿರಸಿಯಲ್ಲಿ.ಯಾಕೋ ಮಠದ ವತಿಯಿಂದ ಪ್ರತಿವರ್ಷ ವಧು-ವರ ಸಮ್ಮೇಳನ ಮಾಡಿದ್ರೆ ಯುವಜನತೆಗೆ ಬಹಳ ಉಪಕಾರ ವಾಗಬಹುದು ಅಂತ ರೋಹಿತನ ಹತ್ರ ಪ್ರಸ್ತಾಪ ಇಟ್ಟೆ. "ಸಾಕು ಸುಮ್ಮನಿರೋ ರಾಜ..ಬಿಟ್ಟಿ ಏಟುಗಳು ತಿನ್ನೋ ಪರಿಸ್ಥಿತಿ ಬರಬಹುದು ನಿನ್ನ ಈ idea ಯಾರಿಗೂ ಹೇಳ್ಬೇಡ"ಅಂದ. ಯಾಕೋ ಈ ವಿಷಯದಲ್ಲಿ ಯೋಚನೆ ಮಾಡಬೇಕಾದವರು ಸಾಕಷ್ಟು ಯೋಚನೆ ಮಾಡುತ್ತ್ತಿಲ್ಲಾ ಅನ್ನಿಸುತ್ತಿದೆ .
ಎಲ್ಲದರ ನಡುವೆ ಶಿರಸಿ ಪೇಟೆಯಲ್ಲಿ ನಿಂತು ಹಿಂಗೆ ಫೊಟೋ ತೆಗಿತಾ ಇದ್ದೆ,ಒಬ್ಬ ಮಹಾನುಭಾವರು ಬಂದು "ಸಾರ್ ನೀವು ರಿಪೋರ್ಟರಾ? "ಅಂತ ಕೇಳಿದ್ರು,ನಾನು "ಹೌದು, ನಾನು ಕ್ರೈಂ ಡೈರಿ ರಿಪೋರ್ಟರ್,ನಿಮ್ಮದು ಒಂದು ಫೊಟೋ ತಗೋಳ್ಳಲಾ? ಒಳ್ಳೆ story ಬರೀತೀನಿ" ಅಂತ reply ಮಾಡಲಿದ್ದವನು ಹಾಗೆ reply ಮಾಡಿದ್ರೆ ಮಾರನೇ ದಿನ "ನಕಲಿ ಕ್ರೈಂ ಡೈರಿ ರಿಪೋರ್ಟರ್ ಆಗಿ ಏಟು ತಿಂದ ಭೂಪ" ಅನ್ನೋ ಪೇಪರ್ headline ಗ್ಯಾರಂಟಿ ಅಂದುಕೊಂಡು ಬಿಟ್ಟಿ smile ಕೊಟ್ಟು ಮುಂದೆ ನಡೆದೆ.
ಮದುವೆ ಮನೆಲಿ ಒಬ್ಬರಂತು ಬಂದು "ಅಪ್ಪಿ, ಯಾವ ಸ್ಟುಡಿಯೋನೋ ನಿಂದು,ಮುಂದಿನ ತಿಂಗಳು ಎಮ್ಮನೇಲಿ...."ಅಂತ photographyಗೆ advance booking ಮಾಡೋ ಪ್ರಯತ್ನ ಮಾಡಿದ್ರು.
ಅದಕ್ಕೆ ನಾನು "ಆನು ಮೈಸೂರಿಂದ ಬಯಿಂದೆ ,special ಆಗಿ ಕರಸಿದ್ದೋ .. " ಅಂತ ಹೇಳಿ ತಪ್ಪಿಸಿಕೊಂಡೆ.ಆದ್ರೆ ಯಾಕೋ company ಕೊಡೋ ಸಂಬಳ ನೋಡಿದ್ರೆ ಯಾಕೋ ಮದುವೆ/ಮುಂಜಿಗಳಲ್ಲಿ ಬಡಿಸುವ/photo ತೆಗೆಯುವ contract ತಗೋಂಡ್ರೆ ಯಾಕೋ ಲಾಭ ಅನ್ನಿಸುತ್ತಿದೆ.
ಅಂದ ಹಾಗೆ importent ವಿಷಯ ಮರೆತೆ ,ನಾಣಿಕಟ್ಟದಲ್ಲಿ ಸುರಿವ ಮಳೆಯಲ್ಲಿ ಕೂತು ಬಿಸಿ ಬಿಸಿ ಬನ್ಸ್-ಭಾಜಿ ಮತ್ತು ಸೇವ್ ಭಾಜಿ ತಿಂದದ್ದು.ಹೊರಗಡೆ ಧಾರಾಕಾರ ಮಳೆ,ಮೈ ಎಲ್ಲ ಚಳಿಗೆ ಮರಗಟ್ಟಿದಂತಾಗಿತ್ತು..ಆ ಹೊತ್ತಿಗೆ ಸರಿಯಾಗಿ ನಿಮಗೆ ಬಿಸಿ ಬಿಸಿ ಬನ್ಸ್ ಸಿಕ್ಕಿದ್ರೆ ಎನು ಆನಂದ ..ಅದೇ ಆನಂದ ನಮಗೂ ಆಗಿದ್ದು.
ಥಾಂಕ್ಯು ಅತ್ತಿಗೆ... ಆ ಹೋಟೆಲ್ ಗೆ ಹೋಗಿ ತಿಂಡಿ ತಿನ್ನಿ ಅಂತ ನಮ್ಮನ್ನ (ನಾನು + ರೋಹಿತ)ಓಡಿಸಿದಕ್ಕೆ...i mean ನೀವು ಹೊಲಿಯೋಕೆ ಕೊಟ್ಟ ಬಟ್ಟೆ ತಗೋಂಡು ಬರೋಕೆ ಹೋಗಿ,ಬರುವಾಗ ದಾರಿಯಲ್ಲಿ ಬೇಕಿದ್ರೆ ಬನ್ಸ್-ಭಾಜಿ ತಿಂದುಕೊಂಡು ಬನ್ನಿ ಅಂತ ಓಡಿಸಿದಕ್ಕೆ.
ಇದನ್ನ ಬರಿಯೋಣ ಅಂತ ಯಾಕೋ ಅನ್ನಿಸಿತು ಬರೆದೆ...
ಬರಿತಾ ಇರಬೇಕಾದ್ರೆ ರಾಜೀವ ping ಮಾಡಿದ್ರು ಅವ್ರು ಮೊನ್ನೆ ತಮ್ಮ ಪತ್ನಿ ಜೊತೆ ಜಪಾನ್ ನ disney world ಗೆ ಹೋದಾಗ ಭೂಕಂಪ ಆಯಿತಂತೆ.ಅದಕ್ಕೆ ನಾನಂದೆ ಗುರುವೇ "ಜೀವನದಲ್ಲಿ ಹೆಂಡತಿಗಿಂತ ದೊಡ್ಡ ಭೂಕಂಪ ಇಲ್ಲ" ಆಂತ ಬಲ್ಲವರು ಹೇಳಿದ್ದಾರೆ.ಎರಡೆರಡು ಭೂಕಂಪ ಸಹಿಸಿಕೊಂಡ ನೀವು gr8 ಅಂತ.
"ದಾಂಪತ್ಯ ಜೀವನ ಅಂದ್ರೆ ಎನು?ಮದುವೆ ಅಂದ್ರೆ ಅನುರಾಗದ ಅನುಬಂಧ ನಾ?ಅಲ್ಲಾ..world war 3ನಾ ?" ಅಂತ ಪ್ರಶ್ನೆ ಕೇಳಿದಾಗ ರೋಹಿತ್ ಉತ್ತರವನ್ನ ಹೀಗೆ ಕೆಳಗಿನ ಫೋಟೋದಲ್ಲಿ ಸೆರೆ ಹಿಡಿದೆ. "ಭಗವಂತ ಎನಪ್ಪಾ ನಿನ್ನ ಲೀಲೆ..." ಅಂತ ಹೇಳಿದಾಂಗೆ ಇತ್ತು. ನನಗೆ ಸರಿಯಾಗಿ ಎನು ಅಂದ್ರು ಅಂತ ಗೊತಾಗ್ಲಿಲ್ಲ. ಗೊತ್ತಾದ್ರೆ ನಂಗೂ ತಿಳಿಸಿ....
11 comments:
ಸನತ್, ಚೆನ್ನಾಗಿದೆ.
ಎಮ್-80 ತರಹದ ಗಾಡಿಗಳು ಇಲ್ಲಿ ಡೆಲಿವರಿ ಬಾಯ್ಸ್, ಗರ್ಲ್ಸ್ ಉಪಯೋಗಿಸುವುದು ಬಹಳ. ಫೋಟೊ ತೆಗೆದು ಕಳಸ್ತೆ.
yeno Sanath, sumne scope tegoltiya kelasa anta!!! adu Buns tinakke ninige permission bekaaa!!!
prani,
naanu nange buns thinnoke permission kelilla.
aa buns thinnoke place ge kaisidakke thanx ande ashte.
matte adu eno scopu anta andyalla hangandre enu ?
The write-up is really good.
I felt as if I am in Sirsi again.
But… could you ever say your dear mother is as bad as an EARTHQUAKE just because she is your father’s WIFE?
Sorry for the harsh comment.
Hi Sanath,
Sirsiya maduve maneya chitravannu chennagi kottiddeera.
Congratulaions!
@Anonymous,
ನಾನು ಬರೆದ ವಾಕ್ಯವನ್ನ ಅರ್ಥ ಮಾಡಿಕೊಳ್ಳುವ ಪ್ರಜ್ನೆ(to be exact) ಹಾಸ್ಯ ಪ್ರಜ್ನೆ ಬೆಳಸಿಕೊಳ್ಳಿ.
ಇದು ಮದುವೆಯ ಬಗ್ಗೆ ಒಂದು ಕುಹಕ ನೀವು ಅರ್ಥ ಮಾಡಿಕೊಂಡರೆ ಸಂತೋಷ
@seema,
thank you.
ಶಿರಸಿ ಬಗ್ಗೆ ಯಾರು ಏನೇ ಹೇಳಿದರೂ ನನ್ನ ಕಿವಿ ನೆಟ್ಟಗಾಗೋದು ಯಾಕೋ ಗೊತ್ತಿಲ್ಲ. ಬಹುಶಃ ಮೂಲತಃ ದ.ಕ.ದವನಾದರೂ ನಾನು ಶಿರಸಿಯನ್ನು ಆ ಪಾಟಿ ಪ್ರೀತಿಸುತ್ತಿದ್ದುದಕ್ಕೇ ಇರಬೇಕು. ಎಲ್ಲವನ್ನೂ ವ್ಯಾವಹಾರಿಕತೆಯ ಚೌಕಟ್ಟಿನೊಳಗೆ ನೋಡುವಂಥ ಮನಸ್ಥಿತಿ ಅಲ್ಲಿನ ಜನರಿಗಿನ್ನೂ ಬಂದಿಲ್ಲ ಎನ್ನುವುದೂ ಈ ಪ್ರೀತಿಗೆ ಕಾರಣವಿರಬಹುದು. ಇರಲಿ, ಶಿರಸಿಯಲ್ಲಿ ಈಗ ಮಳೆ ಜೋರಾಗಿದೆಯಂತೆ. ಒಂದು ಕಾಲದಲ್ಲಿ ಶಿರಸಿಯ ಮಳೆಯನ್ನು ಬೇಕಾಬಿಟ್ಟಿ ಎಂಜಾಯ್ ಮಾಡುತ್ತಿದ್ದ ನಾನೀಗ ಶಿರಸಿಯ ನೆನಪಿನಲ್ಲಿ ಕಾಲು ಸುಟ್ಟ ಬೆಕ್ಕಿನಂತಾಗಿದ್ದೇನೆ. ಸ್ವಲ್ಪ ದಿನ ರಜೆ ಹಾಕಿ ಶಿರಸಿಗೆ ಹೋಗಿ ಬರಬಾರದೇಕೆ ಅಂತ ತುಂಬಾ ಸಲ ಯೋಚಿಸಿದ್ದಿದೆ. ಮಡದಿ ಬಳಿ, ನಿನಗೆ ಅಪ್ಪನ ಮನೆಯ ನೆನಪಾಗುತ್ತಿಲ್ಲವೇ ಅಂತ ಬೇಕಂತಲೇ ಕೇಳುತ್ತಿದ್ದೇನೆ! ಯಾಕೋ ಶಿರಸಿಯ ಸೆಳೆತ ಹಾಗಿದೆ. ನೀವಿಲ್ಲಿ ಶಿರಸಿಯ ಹವ್ಯಕ ಮಾತು, ಮಳೆ, ಬಜ್ಜಿ, ಬನ್ಸ್ ಬಗ್ಗೆ ಹೇಳಿದ್ದು ಓದಿ ಆ ಸೆಳೆತ ಮತ್ತೂ ಜಾಸ್ತಿಯಾಗಿಬಿಟ್ಟಿದೆ!
ಶಿರಸಿಯವರ ಆದರಾತಿಥ್ಯ ನಿಮ್ಮ ಅನುಭವಕ್ಕೆ ಬಂದಿರಲಾರದು. ಅದನ್ನು ಸವಿಯಬೇಕೆಂದರೆ ನಾಲ್ಕಾರು ದಿನ ಅಲ್ಲಿರಬೇಕು. ಹಾಂ! ಇನ್ನೊಮ್ಮೆ ಶಿರಸಿಗೆ ಹೋದರೆ, ಅದರಲ್ಲೂ ಮಳೆಗಾಲ ಯಾ ಚಳಿಗಾಲದಲ್ಲಿ ಹೋದರೆ, ಯಾವುದಾದರೂ ಪುಟ್ಟ ಪೆಟ್ಟಿಗೆ ಹೋಟೆಲ್ ನಲ್ಲಿ ಮಿಸಳ್ ಭಾಜಿ ತಿಂದು ಚಾ ಕುಡಿಯಲು ಮರೆಯಬೇಡಿ.
-ಸುರೇಶ್ ಕೆ.
@ಸುರೇಶ್,
ನಾನು ಬರೆದಿದ್ದನ್ನ ಮೆಚ್ಚಿ ಕೊಂಡಿದಕ್ಕೆ thanx.
ನಾನು ಮುಂದಿನ ಸಾರಿ ಶಿರಸಿ trip ಮಾಡಿದಾಗ ಮಿಸಳ್ ಭಾಜಿ ತಿಂದು ಚಾ ಕುಡಿಯಲು ಮರೆಯೊಲ್ಲ.
@ರೋಹಿತ್/ರಾಜೀವ್,
ನಾನು ಶಿರಸಿಗೆ ಬರೋಕೆ next ಯಾವಾಗ chance ಕೊಡ್ತೀರಿ ?
ಗುರುವೇ... ಶಿರಸಿಯ ಸುಗಂಧವನ್ನು ಬರಹದಲ್ಲಿ ಸೆರೆ ಹಿಡಿದಿದ್ದೀಯ... ತುಂಬಾ ಚೆನ್ನಾಗಿತ್ತು...
ಇದು ಹುಡುಕು ನೋಡಿ
http://www.yanthram.com/kn/
Post a Comment