Wednesday, August 01, 2007

ಮಳೆ ...

ಹೊರಗು ಮಳೆ ಸುರಿಯುತ್ತಿದೆ
ಮಳೆಯಿಂದ ಇಳೆ ಓದ್ದೆ
ಮನಸು ಓದ್ದೆ ಓದ್ದೆ
ಮಳೆ ನೀರು ನೆಲ ಸೇರಿ ಹೊರಗೆಲ್ಲ ಕೆಸರು..
ಹಳೆ ನೆನಪುಗಳು ಕದಡಿ ಮನವೆಲ್ಲ ಕೆಸರು
ಧೋ ಎಂದು ಮಳೆ ಸುರಿದು ಕೆಸರು ಕೊಚ್ಚಿ ಹೋಗಲಿ
ನೆನಪುಗಳು ಕೊಚ್ಚಿ ಹೋಗಲಿ

ಕೂತು ಕಾಯುತ್ತಿದ್ದೇನೆ
ಹಾಳಾದ್ದು ನಿನ್ನ ಕಣ್ಣುಗಳು ಯಾವುದು ಕೊಚ್ಚಿ ಹೋಗದಂತೆ ತಡಿಯುತ್ತಿವೆ
ಯಾಕೆ ಬೇಕಿತ್ತು ನಿನ್ನ ಕಣ್ಣುಗಳ ಸಹವಾಸ
ಮೊದಲು ನಾನು ಸುಖಿಯಾಗಿದ್ದೆ
ನೆಮ್ಮದಿ ಇತ್ತು ಬಾಳಲ್ಲಿ
ಕಣ್ತುಂಬ ನಿದ್ದೆ ಇತ್ತು

ಮಳೆ ಬಂದು ನೆನಪುಗಳ ಕದಡಿ ಹೊಗಿದೆ,
ಧೋ ಎಂದು ಮಳೆ ಸುರಿದು ಎಲ್ಲಾ ಕರಗಿ ಹೋಗಬಾರದೆ..

(ಹೊರಗೆ ನೋಡಿದಾಗ ಮಳೆ ಸುರಿಯುತಿತ್ತು....ಮನಸಿಗೆ ಬಂದಿದ್ದನ್ನ ಬಂದ ಹಾಗೆ ಬರೆದೆ)

9 comments:

Anonymous said...

Enu Sahitigalu Kav(p)i Agtiro hagide...

dinesh said...

observation is the key to creation..

ಅನಿಕೇತನ said...

ಇನ್ನೂ ಜಾಸ್ತಿ ಕವಿತೆಗಳು ಬರಲಿ...!
ಸಾಹಿತಿಗಳ ಜೋಳಿಗೆಯಿಂದ
ಬರಿದಾಗದಿರಲಿ ಶಬ್ದ ಭಂಡಾರ..
ಮರೆಯದಿರಲಿ ಲಾಲಿತ್ಯ
ಕಾಯುವಿಕೆ ಆಗದಿರಲಿ ಅಪಾರ

Sanath said...

@Anonymous ಅಂತ comment ಹಾಕಿರುವ ರಾಘು ಹೆಗಡೆ,
ಈ ಪ್ರಾಯದಲ್ಲಿ ಎಲ್ಲರೂ ಕವಿಗಳಾಗುತ್ತಾರೆ ಅಂತೆ.

@Dinesh,
ಧನ್ಯವಾದಗಳು.

@Rajeev,
ಗುರುವೇ , ತಾವು comment ನೇ ಕವಿತೆ ಲಿ ಕೊಡ್ತೀರಾ..
ತಮ್ಮ ಮುಂದೆ ನಾವುಗಳು ತೃಣ ಸಮಾನರು .
:)

Pranesh said...

sakkath aagittu!!

Anonymous said...

Manadaalada Maathu,Duguda Ukki baralee innu....

Anonymous said...

That is easily the most picturesque description of the rainy day poem that I've seen in a loong time! good work!

Anonymous said...

----------------------------------

For the use of a hassle free kannada anywhere you want directly from the internet.. use http://quillpad.in
It's best for the true Kannadiga!

Unknown said...

ಚೆನ್ನಾಗಿದೆ...
ಮೊದಲು ನೀನು ಬರೀತಿದ್ದ ಸಣ್ಣ ಕವಿತೆಗಳಿಗೆ ಹೋಲಿಸಿದ್ರೆ, ಈಗ ತು೦ಬಾ maturity ಕಾಣ್ತಾ ಇದೆ... ( Do u rememeber the ones u used to write? ನಲ್ಲೆ ಮುತ್ತು ಅಡ್ದ ನಲ್ಲನ ಗಡ್ದ etc etc?? ;))