ಚರ್ಮಾಡಿಯಲ್ಲಿ trafic block ಆದರೆ "24 hours journey" ಕೂಡ ಆಗಬಹುದು.ಎರಡು ವರ್ಷದ ಹಿಂದೆಯೇ ಶಿರಾಡಿ ಘಾಟಿ ಯಾಕೋ ನನ್ನ ಕೈಲೆ ಆಗಲ್ಲ ಅಂತ ಒದ್ದಾಡೋಕೆ ಶುರು ಮಾಡಿತ್ತು ಅದು ಯಾಕೋ ನಮ್ಮ ಕಿವಿಗೆ ಬೀಳಲೇ ಇಲ್ಲ. ಈಗ "enough is enough" ಅಂತ ಶಿರಾಡಿ ಘಾಟಿ ಕೈ ಎತ್ತಿದೆ.ಆದರೂ ನಮ್ಮ ಜನ ಅದರ ಬಗ್ಗೆ ಯೋಚನೆ ಮಾಡದೆ alternate ದಾರಿ ಹುಡುಕಿ ವಯಾ ಚಾರ್ಮಾಡಿ,ವಯಾ ಮೈಸೂರು, ವಯಾ ಶಿವಮೊಗ್ಗ ಅಂತಿದಾರೆ.ಚರ್ಮಾಡಿ ಪಾಪ ಒತ್ತಡ ತಡೀಲಾರದೆ ನರಳುತ್ತಿದೆ,ಮೈಸೂರು ರಸ್ತೆಯಲ್ಲಿ ಕೆಲಸ ನಡಿಯುತ್ತಿದೆ.
ಜನಾ ಅದಕ್ಕೆಲ್ಲಾ adjust ಆಗ್ತಾ "ಒಯ್ ,ಬೆಂಗ್ಳೂರಾ ಹಾಂಗಾದ್ರೆ ನೀವು ಕೈಯಲ್ಲಿ ಒಂದು ನೀರಿನ ಬಾಟ್ಲಿ,ತಿನ್ನ್ಲಿಕ್ಕೆ ಎನಾದ್ರು ತಿಂಡಿ ಕಟ್ಟಿಕೊಂಡ್ರೆ ಒಳ್ಳೇದು ದಾರಿ ಬ್ಲಾಕ್ ಗೀಕ್ ಆದ್ರೆ ಎಂತ ಮಾಡ್ತೀರಿ..ಇವತ್ತು ರಾತ್ರಿಯ ಬಸ್ ಹಾಂಗಾರೆ ನಾಳೆ ಮಧ್ಯಾಹ್ನ ತಲುಪುವುದು ಗ್ಯಾರಂಟಿ " ಅಂತ ಪುಕ್ಕಟೆ ಸಲಹೆ ಕೊಟ್ಟು ತಮ್ಮ ಕರ್ತವ್ಯ ನಿಭಾಯಿಸಿದ ತೃಪ್ತಿಯಿಂದ ಸಾಗುತ್ತಾರೆ.


ನಮ್ಮ ಕೇಂದ್ರ ಭೂ ಸಾರಿಗೆ ಸಚಿವರಾದ ಮಾನ್ಯ ಕೆ.ಎಚ್.ಮುನಿಯಪ್ಪನವರು ಮಂಗಳೂರು ಹೆಸರು ಕೇಳಿದ್ರೆ ಸಾಕು ಬೆವರು ಸುರಿಸುತ್ತಾ "ಎಲ್ಲಾ ಅನುದಾನ ತಮಿಳುನಾಡು ತಗೋತಿದೆ " ಅಂತ ಎಲ್ಲರ ಹತ್ರ ಹೇಳುತ್ತಾ ಬರ್ತಿದಾರೆ.ನಮ್ಮ ಶಾಸಕರು ಯಡ್ಡಿ ಪಟ್ಟಾಭೀಷೇಕದಲ್ಲಿ ಮುಳುಗಿದ್ದಾರೆ ಅಂತ ಅನ್ನಿಸ್ತಾ ಇದೆ. ಹತ್ತು ಹದಿನೈದು ವರ್ಷದ ಹಿಂದೆ ರೈಲು ಹಳಿ ಕಿತ್ತು ಇನ್ನೋಂದು ವರ್ಷದಲ್ಲಿ ಬೆಂಗಳೂರುಗೆ ರೈಲು ಅಂತ ರೈಲು ಬಿಟ್ಟಿದ್ದೆ ಬಿಟ್ಟಿದ್ದು ಪಾಪ ನಂಬಿ ಕೂತ ಜನಕ್ಕೆ ರೈಲೂ ಇಲ್ಲ ಈಗ ಓಡಾಡುವುದಕ್ಕೆ ರಸ್ತೆನೂ ಇಲ್ಲ. ನಾನು engg ಗೆ ಸೇರುವಾಗ ಯಾರೋ ಒಬ್ಬರು ನನ್ನ ಹತ್ರ "ನೀನು ಪಸ್ಟ್ ಯಿಯರ್ ಮಾತ್ರ ಬಸ್ ನಲ್ಲಿ ಹೋಗ್ಬೇಕು, ಇನ್ನೋಂದು ವರ್ಷದಲ್ಲಿ ಮೈಸೂರಿಗೆ ರೈಲು ಇರ್ತದೆ " ಅಂತ ಬಿಟ್ಟ ರೈಲು ನೆನಪಾಗ್ತಿದೆ.
ವಿಧಾನ ಸೌಧದಲ್ಲಿ ಕುಂತಿರುವ ಎಲ್ಲಾ "ಸನ್ಮಾನ್ಯ"ರಲ್ಲಿ ಎನು ವಿನಂತಿ ಅಂದರೆ ಸ್ವಲ್ಪ ಮಂಗಳೂರು -ಬೆಂಗಳೂರು ರೈಲಿನ ಬಗ್ಗೆ ರೈಲು ಬಿಡುವುದು ಕಡಿಮೆ ಮಾಡಿ ರೈಲು ಬರೋದಕ್ಕೆ ಕೆಲ್ಸ ಮಾಡಿ ಇಲ್ಲಾ ರಸ್ತೆ ಸರಿ ಮಾಡಿಸಿ ಕೊಡಿ..ಎರಡೂ ಅಗುವುದಿಲ್ಲ ಅಂತಿದ್ದರೆ ಸುಮ್ಮನಿರಿ ನಮ್ಮ ಜನ ಕೆಟ್ಟ ರಸ್ತೆಗೆ, ಬಾರದ ರೈಲಿಗೆ ಹೊಂದಿಕೊಳ್ತಾರೆ.ನ೦ತರ ಯಾರು ಸಿಕ್ಕಿದ್ರೂ ಎಲ್ಲಿ ಸಿಕ್ಕಿದ್ರೂ "ಆವತ್ತು ನಮ್ಮ ಮಂಗಳೂರಿಗೆ ಅಂತ ಕೊಟ್ಟ ಪೈಸೆಯನ್ನೆಲ್ಲಾ ದೇವೇಗೌಡ ಹಾಸನಕ್ಕೆ ತಿರ್ಗಿಸಿದ್ದಂತೆ ಮಾರಾಯ್ರೆ ..ಗೊತ್ತು೦ಟಾ" ಅ೦ತ ಶುರು ಮಾಡ್ತಾರೆ .

ನಾಡಿದ್ದು ನವೆ೦ಬರ್ 20ಕ್ಕೆ ಪುತ್ತೂರಲ್ಲಿ ರೈಲಿಗಾಗಿ ಧರಣಿಯಂತೆ ಅ೦ತಾ ಸುದ್ದಿ...year end ಅಲ್ಲಿ ರೈಲು ಶುರು ಅ೦ತಾನೂ ಇನ್ನೊ೦ದು ಸುದ್ದಿ... ರೈಲು ಶುರುವಾದ್ರೆ ಒಳ್ಳೇದು ಇಲ್ಲಾ೦ದ್ರೆ ಮಂಗಳೂರು -ಬೆಂಗಳೂರು ಪ್ರಯಾಣದ ಶಿಕ್ಷೆ ಮು೦ದುವರಿಯಲಿದೆ.
ಎನೇ ಇರಲಿ..ಯಾರಾದ್ರು ಮಂಗಳೂರು -ಬೆಂಗಳೂರು ರೈಲಿಗೆ ಕಾಯುತ್ತಿದ್ದರೆ ಕುಮಾರಣ್ಣನ style ಆಲ್ಲಿ ಹೇಳೋದಾದ್ರೆ "ಮಂಗಳೂರು -ಬೆಂಗಳೂರು ರೈಲು ಏನಿದೆ...<ದೊಡ್ದ pause>...ಅದು ಶುರುವಾಗಬೇಕು ಅ೦ತಾ ಜನ ಏನು ಬಯಸ್ತಿದಾರೆ ...<ದೊಡ್ದ pause>... ಏನು ಈ ರೈಲು ನಡೀಬೇಕು ಅ೦ತ ಎಲ್ಲರ ಆಸೆ ಇದೆ ...<ದೊಡ್ದ pause>...ಈ ಬಗ್ಗೆ ಸರಕಾರ ಕ್ರಮ ಏನು ಕೈಗೊಳ್ಳೂತ್ತದೆ ಜನ ಏನು ಕಾಯ್ತಿದಾರೆ ...<ದೊಡ್ದ pause>...ರೈಲಿಗಾಗಿ ಏನು ಜನ ಕಾಯ್ತಿದಾರೆ ...<ದೊಡ್ದ pause>...ರೈಲು ಬರ್ತದೆ ಅ೦ತ ಜನ ಏನು ಕಾಯ್ತಿದಾರೆ ...<ದೊಡ್ದ pause>... ಅವರಿಗೆಲ್ಲಾ ಒಳ್ಳೇದಾಗಲಿ" ಅಥವಾ simple ಆಗಿ ಹೇಳೋದಾದ್ರೆ all the best....
shhhh....ಕೊನೆಯಲ್ಲಿ ಒ೦ದು ಗುಟ್ಟು : ಬರ್ಮುಡಾ ತ್ರಿಕೋಣ ,UFO,ಅನ್ಯ ಗ್ರಹ ಜೀವಿಗಳೋಂದಿಗೆ ವಿಶ್ವದ ಬಿಡಿಸಲಾಗದ ಕಗ್ಗ೦ಟುಗಳು i mean "worlds unsolved Mysteries" ನಲ್ಲಿ ಮಂಗಳೂರು -ಬೆಂಗಳೂರು ರೈಲು ಶುರುವಾಗುವ ದಿನ ಹೊಸ ಸೇರ್ಪಡೆಯ೦ತೆ.
4 comments:
ಇದು NH48 ಅಷ್ಟೇ ಅಲ್ಲ... NH4 ಆಗಿರುವ ಸುವರ್ಣ ಚತುಷ್ಪಥ ರಸ್ತೆಯ ಕಥೆಯೂ ಸಹ. ಬೆಂಗಳೂರಿನಿಂದ ಹಿರಿಯೂರಿನಿಂದ ರಸ್ತೆ ಚೆನ್ನಾಗಿದೆ. ಮುಂದೆ ಅರ್ಧ ಮುಗಿದ ಕಾಮಗಾರಿಗಳಿಂದಾಗಿ ರಸ್ತೆ ಹದಗೆಟ್ಟಿದೆ. ಐರಾವತದಲ್ಲಿ ಪ್ರಯಾಣ ಕೈಗೊಂದರೂ ನಿದ್ದೆ ಬರುವುದಿಲ್ಲ.
aha
keep it up.
ಬರೆದಿದ್ದು ಚೆನ್ನಾಗಿದೆ.
ಎಲ್ಲಾ ಊರಿನ ಎಲ್ಲಾ ರಸ್ತೆಗಳ ಕಥೇನೂ ಅದೇ ಬಿಡಿ.
ಹೊಂಡಗಳ ಮಧ್ಯೆ ರಸ್ತೆ ಎಲ್ಲಿದೆ ಅಂತಾ ಹುಡುಕಿಕೊಂಡು drive ಮಾಡಬೇಕಾಗಿದೆ!
ಯಾವುದಾದ್ರೂ ಮಂತ್ರಿಗಳು ಬರ್ತಾರೆ ಅಂದ್ರೆ ಒಮ್ಮೆ ಹೊಂಡ ಮುಚ್ಚುತ್ತಾರೆ.
ಯಾಕೆ ಅಂದ್ರೆ ಅವರ ಕಾರು ಹೊಂಡದಲ್ಲಿ ಇಳಿದು ಅವರ ಬೆನ್ನು ನೋವಾಗಬಾರದಲ್ಲ, ಅದಕ್ಕೆ.
ನಂತರ ಮೂರೇ ದಿನದಲ್ಲಿ ರಸ್ತೆ ಮತ್ತೆ ಯಥಾ ಸ್ಥಿತಿ.
ಅದೊಂಥಾರಾ ನಿಜಾನೇ.... ನಿಮ್ಮೂರ್ಗೋಗೋ ದಾರಿ ಒಂಥರಾ ಮಿಸ್ಟ್ರೀನೇ.... ಸರಿ....
Post a Comment