Friday, August 25, 2006

ಮಳೆ...ಮಳೆ...ಮಳೆ....

ಮಳೆ...ಮಳೆ...ಮಳೆ....
ಇಡೀ ವರ್ಷದ ತುಂಬಾ ಸುಂದರವಾದ ಋತು "ವರ್ಷಋತು".
ಯಾಕೊ ಗೊತ್ತಿಲ್ಲ ಮಳೆ ನನಗೆ ತುಂಬಾ ಇಷ್ಟವಾಗುತ್ತದೆ. ನಾನು ಹುಟ್ಟಿ ಬೆಳೆದದ್ದು ಅರೆ ಮಲೆನಾಡಿನಲ್ಲಿ (ಯಾಕೆ ಅಂದರೆ ಭೌಗೊಳಿಕವಾಗಿ ನಮ್ಮ ಊರು ಕರಾವಳಿ ಮತ್ತು ಮಲೆನಾಡುಗಳ ನಡುವಿನ junction)..ಮಳೆ ಅಂದರೆ ಅಮ್ಮನಿಗೆ ಬಟ್ಟೆ ಓಣಗದ ಚಿಂತೆ,ಹಪ್ಪಳ ಸಂಡಿಗೆ ಮಾಡಲು ಆಗುವುದಿಲ್ಲವಲ್ಲ ಎಂಬ ಚಿಂತೆ..ಮಳೆ ಅಂದರೆ ಅಪ್ಪನಿಗೆ ಪೇಟೆಗೆ ಹೋಗೋವಾಗ ಒದ್ದೆ ಯಾಗುವ ಚಿಂತೆ..ಮಳೆ ಅಂದರೆ ತಮ್ಮನಿಗೆ ಶಾಲೆಗೆ ರಜೆ ಸಿಕ್ಕಬಹುದು ಎಂಬ ಖುಶಿ...ರಜೆ ಸಿಕ್ಕಿದರೂ ಆಟ ಆಡೊಕ್ಕೆ ಆಗಲ್ಲ ಅನ್ನೊ ಚಿಂತೆ. ಆದ್ರೆ ಮಳೆ ಸಮಸ್ತ ಹಸಿರಿಗೆ ಚಿರುರೊಡೆವ ಜೀವದ್ರವ್ಯ.ಭೂಮಿಗೆ ಹಚ್ಚ ಹಸಿರಿನ ಹೊದಿಕೆ ಹೊದೆಸುವ ಸಂಗಾತಿ.
ಮಳೆ ನಿಮಗೆ ಯಾವ ಅನುಭವವನ್ನು ಕೊಡಬಹುದು..ಅದು ನಿಮಗೆ ಬಿಟ್ಟದ್ದು.. tip tip barsaa paani..paani ne aag lagaayi... ಅಂತ ನಿಮಗೆ ತನ್ನ ಸಿಂಚನದಿಂದ ಮೈ ಬಿಸಿ ಹೆಚ್ಚಿಸಬಹುದು. ಭಗ್ನ ಪ್ರೇಮಿಯ ಕಾದ ಹೃದಯಕ್ಕೆ ತಂಪಾದ ಪನ್ನೀರ ಧಾರೆಯಾಗಿ ತಂಪು ನೀಡಬಹುದು ಅಥವಾ ಅವನ ದು:ಖದಲ್ಲಿ ಭಾಗಿಯಾಗಿ ಕಣ್ಣೀರಧಾರೆಯಾಗಬಹುದು.ನಿಮಗೆ ನಿದ್ದೆ ಬರುತ್ತಿದ್ದರೆ ಮಳೆ ಸುರಿವ ಸದ್ದು ಜೋಗುಳವಾಗಬಹುದು.ಆಫೀಸ್ ಗೆ ತಡವಾಗಿ ಹೋಗಲು ಕಾರಣವಾಗಬಹುದು. ಜೋಡಿಗಳಿಗೆ ಒಂದೇ ಕೊಡೆ ಹಿಡಿದು ನಡೆವ ಬಿಸಿಯಪ್ಪುಗೆಯ romantic ಅನುಭವ ನೀಡಬಹುದು.
ಪಾನಿ ರೇ ಪಾನೀ ರೇ ತೇರಾ ರಂಗ್ ಕೈಸಾ....

No comments: