ಆತನಿಗೆ ಜಗವೆಲ್ಲ ಅಂಧಕಾರ.ಎನೇನೂ ಕಾಣದು.ಆತನಿಗೆ ತನ್ನ ಮೇಲೆ ಬೇಸರ,ಜಿಗುಪ್ಸೆ.ಈ ಕುರುಡು ಜೀವನಕ್ಕಿಂತ ಸಾವೇ ಮೇಲು ಎಂದು ಗೊಣಗುತ್ತಿದ್ದ.ಅತನನ್ನು ಪ್ರೀತಿಸುವವರು ಯಾರೂ ಇರಲಿಲ್ಲ, ಅವಳೊಬ್ಬಳ ಹೊರತಾಗಿ.ಆಕೆಗೆ ಗೊತ್ತಿತ್ತು ಅವನಿಗೆ ಕಣ್ಣಿಲ್ಲವೆಂದು. ಆದರೂ ತೀವ್ರವಾಗಿ ಪ್ರೀತಿಸುತಿದ್ದಳು. ತನಗೆ ದೃಷ್ಟಿ ಭಾಗ್ಯ ದೊರತ ದಿನವೆ ಆಕೆಯನ್ನು ಮದುವೆ ಆಗುವುದಾಗಿ ಆತ ಹೇಳುತಿದ್ದ.
ಅದೆಂಥಾ ಪವಾಡವೋ ಎನೋ? ಅವನಿಗೆ ಎಕಾಎಕಿ ಒಂದು ದಿನ ದೃಷ್ಟಿ ಬಂತು. ಎರಡೂ ಕಣ್ಣುಗಳು ಕಾಣಿಸತೊಡಗಿದವು.ಅಷ್ಟು ದಿನ ತನ್ನನ್ನು ಪ್ರೀತಿಸಿದ ಹುಡುಗಿಯನ್ನು ಹುಡುಕಲಾರಂಭಿಸಿದ.ಕೊನೆಗೂ ಆಕೆ ಸಿಕ್ಕಳು. ಆತನ ಜಂಘಾಬಲವೇ ಉಡುಗಿಹೋಯಿತು.ನೋಡಿದರೆ ಆಕೆಗೆ ಎರಡೂ ಕಣ್ಣುಗಳಿಲ್ಲ! ಆತನಿಂದ ಮಾತು ಬಾರದಿದ್ದನ್ನು ಗಮನಿಸಿ ಆಕೆ ಕೇಳಿದಳು-"ನನ್ನನ್ನು ಮದುವೆ ಆಗ್ತೀಯಾ?".
"ಈ ಕುರುಡಿಯನ್ನು ಮದುವೆ ಆಗುವುದುಂಟಾ?,ಸಾಧ್ಯವೇ ಇಲ್ಲಾ .ನಿನ್ನಂಥ ಕುರುಡಿಯನ್ನು ಮದುವೆಯಾಗಲಾರೆ" ಎಂದು ಬಿಟ್ಟ.ಆಕೆಗೆ ದುಃಖ ತಡೆದುಕೊಳ್ಳಲಾಗಲಿಲ್ಲ.ಒಂದೇ ಸಮನೆ ಬಿಕ್ಕಿ ಬಿಕ್ಕಿ ಅತ್ತಳು .ಕೊನೆಗೆ ಹೋಗುವಾಗ ಆತನೆಡೆಗೆ ಕೈ ಬೀಸುತ್ತಾ "ಮದುವೆಯಾಗದಿದ್ದರೆ ಪರವಾಗಿಲ್ಲ ಬಿಡು.ನನ್ನನ್ನು ನೀನು ನೋಡಿಕೊಳ್ಳಬೇಕಾಗಿಲ್ಲ.ಆದರೆ ನನ್ನೆರಡು ಕಣ್ಣುಗಳನ್ನು ಜೋಪಾನವಾಗಿಟ್ಟುಕೊಂಡಿರು" ಎಂದು ಹೇಳಿ ಹೊರಟು ಹೋದಳು.
1 comment:
Hey,
This story is really good one yaar.
Keep up the momentum
~Harsha
Post a Comment