Sunday, October 29, 2006

ಗಂಗೂಲಿಯೆಂಬ ಶಪಿತ ರಾಜಕುಮಾರನ ಮಗಳ ಪ್ರಾರ್ಥನೆ

ಬ್ಯಾಟ ನೇವರಿಸಿ ಎದೆಗಪ್ಪಿಕೊಂಡ ಗಂಗೂಲಿಯ
ಮಗಳ ಕಣ್ಣಂಚಿನಲ್ಲಿ ಒಂದು ಹನಿ ನೀರು.
ಸದಾ ಕ್ರಿಕೆಟ್ ಮುಗಿಸಿ ಬರುತ್ತಿದ್ದ ಅಪ್ಪನ
ತೊಡೆಯಲ್ಲಿ ಕುಳಿತು ಮಗಳದೇ ಕಾರುಬಾರು.

ಅಪ್ಪ ಕ್ರಿಕೆಟ್ ಆಡುತ್ತಿದ್ದಾಗ ಬ್ಯಾಟ್ ಕಿಟ್ ಒಳಗಿತ್ತು,
ನಾನು ಎದೆಗಪ್ಪಿ ಕುಳಿತಿರುತಿದ್ದೆ.
ಈಗ ಬ್ಯಾಟ್ ಎದೆಗಪ್ಪಿದೆ,
ನಾನು ಮೂಲೆಗೆ ಎಂಬ ಅಳಲು.

ಯಾವಾಗ ಶರ್ಟ್ ಬಿಚ್ಚಿ ಮತ್ತೆ ಬೀಸುವೆ?
ಯಾವಾಗ ಬ್ಯಾಟ್ ಮತ್ತೆ ಕೈಗೆತ್ತಿಕೊಳುವೆ?
ಯಾವಾಗ ಶಾಪ ತೊಲಗಿ ಮತ್ತೆ ಆಡುವೆ?
ಎಂದು ಕಲಕತ್ತಾದ ಯುವರಾಜನ ಚಿಂತೆ.

ಸದಾ ಬ್ಯಾಟನಪ್ಪಿ ಟಿ.ವಿ.ಯ ಎದುರು
ಹತಾಶನಾಗಿ ಕುಳಿತು ಹಳೇ ಪಂದ್ಯದ
ವೀಡಿಯೋ ನೊಡುತ್ತಿರುವ ತಂದೆಯ ಪಕ್ಕದಲಿ
ಕುಳಿತ ಮಗಳ ಮುಖ ಸೋತು ಬಿದ್ದಿತ್ತು.

ತಂಡದಲಿ ಸ್ಥಾನ ಸಿಗಲಿ,ಸಿಕ್ಕಿದರೆ ನನ್ನ ಮೌಲ್ಯ ತೋರಿಸುವೆ
ಎಂದು ಗಂಗೂಲಿಯ ಪ್ರಾರ್ಥನೆ.
ಅಪ್ಪ ಕ್ರಿಕೆಟ್ ಆಡಲಿ ,ಬ್ಯಾಟ್ ಮೂಲೆಗೆ ಹೋಗಲಿ,
ನನ್ನ ಪುನಃ ಎದೆಗಪ್ಪಿಕೊಳ್ಳಲಿ ಎಂದು ಮಗಳ ಪ್ರಾರ್ಥನೆ.

1 comment:

Subhash said...

ತಮ್ಮ್ ಹಾಗು ಗಂಗೂಲಿಯ ಮಗಳ ಪ್ರಾರ್ಥನೆ ಆ ಭಗವಂತ ಕೇಳಿದ್ದಾನೆ... :-)