Thursday, February 22, 2007

ಮುಂಗಾರು ಮಳೆ hangover

sud -sudden ಆಗಿ ಎಲ್ಲಾರು ಮುಂಗಾರು ಮಳೆ hangover ಅಲ್ಲಿ ಇದ್ದಾರೆ ಅನ್ನಿಸ್ತಿದೆ.
ಎಲ್ಲಿ ನೋಡಿದ್ರು ಮುಂಗಾರು ಮಳೆ ...ಮುಂಗಾರು ಮಳೆ ...ಮುಂಗಾರು ಮಳೆ .
ನಿನ್ನೆ ದುಬೈನಲ್ಲಿರೊ ದೋಸ್ತ್ ಗೆ phone ಮಾಡಿದ್ರೆ first question "ಮುಂಗಾರು ಮಳೆ ನೋಡಿದ್ಯಾ? ಹೆಂಗಿದೆ ? ಎಲ್ಲಾರು ಚೆನ್ನಾಗಿದೆ ಅನ್ತಿದಾರೆ"
ಕಳೆದ ವಾರ ಚೆನ್ನೈ ಗೆ ಯಾವುದೋ function ಗೆ ಹೋಗಿದ್ದೆ ..ಹೋಗ್ತಾ ರೈಲಲ್ಲಿ ನಮ್ಮ ನಡುವೆ ನಡೆದ conversation ತುಣುಕು
"ಮುಂಗಾರು ಮಳೆ ನೋಡಿದ್ಯಾ? ಸಕ್ಕತ್ತಾಗಿದೆ ಅಲ್ವ ಮಗಾ"
"ಲೋ.$@#$$#@###..ನಾನು ಅದನ್ನ 5 ಸಲ ನೋಡಾಯಿತು"
"ಯಾಕೊ ನನ್ನದೇ life ಸ್ಟೋರಿ ಅನ್ನಿಸ್ತಾ ಇದೆ ಕಣೋ "
"ಸ್ವಲ್ಪ ಮುಚ್ಕೊಂಡು ಕೂರ್ತಿಯ..ಎಲ್ಲಿ chance ಸಿಗೊತ್ತೋ ಅಲ್ಲಿ scope ಹೊಡಿಯೊಕೆ try ಮಾಡ್ತೀಯಲ್ಲೊ ಬೇ..."

ಬೆಂಗಳೂರಿನಲ್ಲಿ ಆಟೋ ದಲ್ಲಿ ಹೋಗ್ತಿರುವಾಗ ತೆಲುಗು ಹಾಡು ಹಾಕಿದ.ಗುರುವೇ ಕನ್ನಡ ಹಾಡು ಕೇಳಿಸು ಅಂದೆ..ಸಾರ್ ಹಾಕ್ತೀನಿ ಅಂತ ಹಾಕಿದ ಕೂಡಲೇ ಸ್ಪೀಕರ್ ಕೂಗೋಕೆ start ಮಾಡಿತು..."ಕುಣಿದು ಕುಣಿದು ಬಾರೇ..ಒಲಿದು ಒಲಿದು ಬಾರೇ.."
ತಮ್ಮಂಗೆ phone ಮಾಡಿದ್ರೆ ಮೊದಲೆಲ್ಲಾ ಹಿಂದಿ ಹಳೇ ಹಾಡು caller tune ಆಗಿ ಕೆಳಿಸ್ತಿತ್ತು..ಅದ್ರೆ ಮೊನ್ನೆ " ಅನಿಸುತಿದೆ ಯಾಕೋ ಇಂದು ...ನೀನೇನೇ.."
ನಿನ್ನೆ T.V. ಹಾಕಿದ ಕೂಡಲೇ U2 ನಲ್ಲಿ ಹೇಳುತಿದ್ದ "thanks for kaaling ,ನಿಮಗಾಗಿ ಮುಂಗಾರು ಮಳೆ ಚಿತ್ರದ ಒಂದು ಸುಂದರ ಆಡು ..ನೋಡಿ Yenjoi ಮಾಡಿ"
..."ಕುಣಿದು ಕುಣಿದು ಬಾರೇ..ಒಲಿದು ಒಲಿದು ಬಾರೇ.."

ಮೈಸೂರಲ್ಲಿ ಒಪೇರಾ ಅನ್ನೋ ಚಿತ್ರಮಂದಿರ ಇದೆ ಅಂತಾ ಯಾರೀಗೂ ಗೊತ್ತಿರಲಿಲ್ಲ. ನಾನು ಕಾಲೇಜಿಗೆ ಹೊಗ್ತಿದ್ದಾಗ ಒಪೇರಾ ದಲ್ಲಿ ಯಾವಾಗ್ಲೂ ಡಬ್ಬಾ .third rate films ಬರೋದು ಅಂತ ಸುಮಾರು ಸೀನಿಯರ್ಸ್ ಹೇಳ್ಥಿದ್ರು...ನಾನು ಮೈಸೂರಿನ all most ಎಲ್ಲಾ ಚಿತ್ರಮಂದಿರಗಳಿಗೆ ಕಾಲೇಜು ದಿನಗಳಲ್ಲಿ educational ಭೇಟಿ ಕೊಟ್ಟಿದ್ರೂ ಒಪೇರಾ ಗೇ ಹೊಗಿಲ್ಲಾ .
ಆದ್ರೆ ಈಗ ಒಪೇರಾ ದಲ್ಲಿ ಬಾಲ್ಕನಿ ಟಿಕೆಟ್ ಬ್ಲಾಕಲ್ಲಿ 150 ಕ್ಕೆ ಹೋಗೊತ್ತೆ ಯಾಕೆ ಗೊತ್ತಾ ..ಒಪೇರಾ ದಲ್ಲಿ ನಡಿತಾ ಇರೋದು ಮುಂಗಾರು ಮಳೆ .

ನನಗೆ ಮುಂಗಾರು ಮಳೆ ಚೆನ್ನಾಗಿದೆ ಅನ್ನಿಸಿತು. ಈ crazeಗೆ ಕಾರಣ ಎನಿರಬಹುದು ಅಂತಾ ಆಲೋಚನೆ ಮಾಡ್ತಾ ಇದ್ದೆ.
ಜನ ದರ್ಶನ್ ಮಚ್ಚ್ಹುಫಿಲಮ್,ಉಪ್ಪಿ ಯ ಅದೇ ಮ್ಯಾನರಿಸಂ ನ ಫಿಲಮ್ ಗಳು,ಸುದೀಪ್ ನ ತಿರುಪತಿ ತರಹದ ಮಚ್ಚು ಫಿಲಮ್ ,ಹೊಸ ಹುಡುಗರ ಮಚ್ಚು ಫಿಲಮ್ ಗಳು, ಡಾ. ವಿಷ್ಣುರವರ ಮೀಸೆ ಬ್ರಾಂಡ್ ಸಿನಿಮಾಗಳು, ಕಲಾ ಸಾಮ್ರಾಟ್ ನಾರಾಯಣನ ತಾಯಿ ಸೆಂಟಿಮೆಟ್ ಚಿತ್ರಗಳನ್ನು ನೋಡೀ..ನೋಡೀ...ಮೆಂಟಲ್ ಆಗಿದ್ರು.ಎಲ್ಲಾರು "ಬಾರೇ ಬಾರೇ ನನ್ನ ಬಜಾರಿ", "ಇಳೀಬ್ಯಾಡ ಮಗ ಇಳೀಬ್ಯಾಡ ರೌಡಿಸಂಗೆ","ಕೇಳ್ಕೋಂಡು ಬಾರೋ ಅಂದ್ರೆ ಮಾಡ್ಕೊಂಡು ಬರ್ತಿಯಾ", "ರಕ್ಷಿತಾ,ರಕ್ಷಿತಾ
..ನನ್ನ ಕಿಸ್ಸು ಸಿಕ್ಕಿತಾ" ತರಹಾ ಕೆಟ್ಟ ಕೆಟ್ಟ ಹಾಡು ಕೇಳಿ ಸುಸ್ತಾಗಿದ್ರು.
so ಮುಂಗಾರು ಮಳೆ ಸ್ವಲ್ಪ different ಅನ್ನಿಸಿತು. ಹಾಡುಗಳು ಹಿತ ಅನ್ನಿಸಿತು.ಜಯಂತ ಕಾಯ್ಕಿಣಿ ಬರೆದ ಹಾಡುಗಳ lyrics ಮನ ಮುಟ್ಟಿದವು.

ಎನೇ ಹೇಳಿ ಇಂಥಾ ಚಿತ್ರ ಕೊಟ್ಟ ನಿರ್ದೇಶಕ ಯೋಗರಾಜ ಭಟ್ ಗೆ, ಕಾಮಿಡಿ ಟೈಮ್ ಗಣೇಶನಿಗೆ thanks a lot .

1 comment:

Subhash said...

ಗುರುವೆ... ತುಂಬಾ time ಆದ ನಂತರ ನಿಮ್ಮ blog ಓದಿದೆ.. ಮುಂಗಾರು ಮಳೆ ನೋಡಿ ಒಂದೆರಡು ವಾರಗಳಾಗಿವೆ..ನಮ್ಮವರೊಂದಿಗೆ ನೋಡಿದ ಮೊದಲ picture.. :-)

ನೀವು ಹೇಳಿದ ಹಾಗೆ..ಎಲ್ಲಾ ಜನ ಅಷ್ಟೊಂದು ಹುಚ್ಚರಾಗಿದ್ದಾರೆ ಅಂತ ನಂಗೂ ಗೊತ್ತಾಗಿಲ್ಲ.. ಆದರೂ..ಫಿಲಮ್ಮು ಚೆನ್ನಾಗಿತ್ತು.. songs ಮಾತ್ರ suuuuppeeru!! :-)