Friday, June 22, 2007

ಮುಂಗಾರುಮಳೆಯೂ..... ಯಕ್ಷಗಾನವೂ...


ನಿನ್ನೆ ನನ್ನ ಗೆಳೆಯನೊಂದಿಗೆ ಮಾತನಾಡುತ್ತಾ ಮುಂಗಾರುಮಳೆ ಯಕ್ಷಗಾನದ ಬಗ್ಗೆ ತಿಳಿಯಿತು.
ಯಾವ ಪ್ರಸಂಗಕರ್ತ ಇಷ್ಟು ಕೆಳಗಿಳಿದು ಸೂಪರ್ ಹಿಟ್ ಚಿತ್ರವನ್ನ ಯಕ್ಷಗಾನಕ್ಕೆ ಅಳವಡಿಸಬಹುದು ಎಂದು ನಾನು ಅಂದುಕೊಂಡಿದ್ದೆ.ಆಮೇಲೆ ಆ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ ಅಂತ ಮೇಲೆ ಯಾವುದೇ ಸಂದೇಹ ಉಳಿಯಲಿಲ್ಲ,ಆ ಮನುಷ್ಯ ಮಲೆಯಾಳಿ ಸುಂದರಿಯರ ಯಾವುದಾದರೂ ಸೂಪರ್ ಹಿಟ್ "ದೇವರ ಚಿತ್ರ" ಗಳನ್ನ ಯಕ್ಷಗಾನಕ್ಕೆ ಆಳವಡಿಸದಿರಲಿ ಎಂಬುದೇ ದೇವರಲ್ಲಿ ನನ್ನ ಪ್ರಾರ್ಥನೆ .

ಈ ದೇವದಾಸ್ ಈಶ್ವರಮಂಗಲ ಅವರು ಹಿಂದೆ ಆಪ್ತಮಿತ್ರ ದ ಕಥೆಯನ್ನ ಬಳಸಿ "ನಾಗವಲ್ಲಿ" ಎಂಬ ಪ್ರಸಂಗ ಬರೆದಿದ್ದರು.ಅದು ಯಕ್ಷಗಾನದಲ್ಲಿ ಸೂಪರ್ ಹಿಟ್ ಕೂಡ ಆಯಿತು.ಈಗ ಶ್ರೀಯತರು ಮುಂಗಾರು ಮಳೆಯನ್ನ "ಪ್ರೇಮಾಭೀಷೇಕ"ವಾಗಿ ತಂದಿದ್ದಾರೆ.
ಮುಂಗಾರು ಮಳೆಯ ನಂದಿನಿ ಮತ್ತು ಪ್ರೀತಮ್ ಈಗ ರಂಗ ಸ್ಥಳಕ್ಕಾಗಿ ಪ್ರೇಮ ಮತ್ತು ಅಭಿಷೇಕ ಆಗಿದ್ದಾರೆ.
ಭಾಗವತರ ಕೈಲಿ "ಅನಿಸುತಿದೆ ಯಾಕೋ ಇಂದು .." ಹಾಡಿನ ಎರಡು ಲೈನ್ ಕೂಡ ಹಾಡಿಸಿದ್ದಾರೆ ಅಂತೆ.
ಎನೋ ಅಪ್ಪಾ ಆ ಮನುಷ್ಯನಿಗೆ ಯಕ್ಷರಂಗದ "ಎಸ್.ನಾರಾಯಣ್" ಎಂಬ ಬಿರುದು ಕೊಡಬಹುದು ಅಲ್ವಾ.

ಮೊನ್ನೆ ಜೂನ್ 12ರಂದು ಅನ್ನಿಸುತ್ತೆ, ಉಡುಪಿಯಲ್ಲಿ ಪ್ರೇಮಾಭೀಷೇಕ ಪ್ರಸಂಗವಿತ್ತು.ಕಲೆಕ್ಷನ್ ಚೆನ್ನಾಗಿತ್ತಂತೆ.
ಎನೋ ಜನ ಕುತೂಹಲಕ್ಕೆ ಬಂದಿರಬಹುದು .ದೇವದಾಸ್ ಈಶ್ವರಮಂಗಲ ಎನು ಬರೆದರೂ ಅದನ್ನ ಆಡಿಸ ಹೊರಟ "ಮಂಗಳಾದೇವಿ ಮೇಳ"ದ ವ್ಯವಸ್ತಾಪಕರಿಗಾದ್ರೂ ತಲೆ ಬೇಡ್ವಾ? ಕಾಸು ಹುಟ್ಟತ್ತೆ ಅಂತ ಎನು ಬೇಕಾದ್ರೂ ಪ್ರಸಂಗ ಆಡಿಸೋದಾ?
ಕೆರೆಮನೆಯವರು ಯಾವುದಕ್ಕೋ "ಸಾಂಸ್ಕೃತಿಕ ಅಪರಾಧ" ಅಂದಿದ್ದು ನೆನಪಾಗುತ್ತಿದೆ.ಬಹುಶ ಇದನ್ನು ಆ categoryಗೆ ಹಾಕಬಹುದು

ಆದರೆ ಇದು ಯಾಕೋ ನಂಗೆ ಸರಿ ಕಾಣ್ತಾ ಇಲ್ಲ.
ಇನ್ನು ಎನಿದ್ರೂ ಯಕ್ಷ ಪ್ರೇಮಿಗಳುಂಟು..ಯಕ್ಷ ಗಾನವುಂಟು ಎಂದು ಸುಮ್ನಿರಬೇಕಷ್ಟೆ ಅಲ್ವಾ..
ಸುಮ್ನಿರೊಕೆ ಮನಸು ಒಪ್ತಾ ಇಲ್ಲ ...
ನಮ್ಮದೀನಿದ್ರು ಪ್ರಸಂಗ ಬರಿಯುವವರಿಗೂ,ಪ್ರಸಂಗ ಆಡಿಸುವವರಿಗೂ ಒಳ್ಳೆ ಬುದ್ಧಿ ಬರಲಿ,ಯಕ್ಷ ಪ್ರೇಮಿಗಳಿಗೆ ಯಕ್ಷಗಾನ ಮುದ ಕೊಡಲಿ ,ಯಕ್ಷಗಾನ ಕಲೆ ಬೆಳೆಯಲಿ ಅಂತ ಹಾರೈಕೆ.
ಎನೋ ಬರುವ ತಿರುಗಾಟಕ್ಕೆ "ಮಂಗಳಾದೇವಿ ಮೇಳ"ದ್ದು ಹೊಸ ಪ್ರಸಂಗ ಅಂತೆ "ದೇವದಾಸ್ ಈಶ್ವರಮಂಗಲ " ವಿರಚಿತ "ಶಿವಾಜಿ"...ಹೌದಾ?

5 comments:

Suma Udupa said...

Hi Sanath,
Mungaaru male yakshagana aagutte anta gottittu. Ramesh Begar baradaddu andu kondidde. Yava mela ...etc details gottirlilla. Yene irali suddi kelidaaginda bahala sankata agta ittu. Ondu olle yakshgana nodade varsha gale aytu. Puranika prasanga aadisi adralli double meaning maatado kalavidaru ... picture katege yakshagana aadtaare bidi... Yaarige buddi heloodu - meladavariga?? protsaahiso prekshakariga?? :((

Sanath said...

hi suma,
ಯಾರಿಗೂ ಬುದ್ಧಿ ಹೇಳೋದು ಬೇಕಿಲ್ಲ.ಬುದ್ಧಿವಂತರು ಕಲೆಯನ್ನ ಅವರ ವಿವೇಚನೆಗೆ ತಕ್ಕಂತೆ ಸಮಾಜದ ಒಳ್ಳೆಯದಕ್ಕೆ ಬಳಸುತ್ತಾರೆ.ಇನ್ನೂ ಕೆಲವರು ವಿವೇಚನೆ ಇಲ್ಲದೇ ತಮಗೆ ಬೇಕಾದ ಹಾಗೆ ಬಳಸುತ್ತಾರೆ.ಅವರುಗೆ ಬುದ್ಧಿ ಹೇಳಿ ಪ್ರಯೋಜನವಿಲ್ಲ.
ಎಲ್ಲಾ ಪ್ರೇಕ್ಷಕರ/ಯಕ್ಷಪ್ರೇಮಿಗಳ ವಿವೇಚನೆಗೆ ಬಿಟ್ಟಿದ್ದು

Pranesh said...

@Sanath....

cannot help it, but everything has to undergo a change, and whether the change is expected or rejected depends on the masses, and it does not depend on if the change is good or bad..... Lots of species on earth are nearing extinction or are on the verge of it, and also lots of civilizations and culture and you can never predict which are the one's that will survive, can you?

Raghu said...

Sanath,
Idanna odidaga nanage TV 9 channel nalli banda "Mantapa" mattu "Eswara mangala" avra jotegina samvada mattu alli Mantap nudida atrha grbhita matugale nenapaytu.
“Anisutide” hadige patradhari Rangastaladamele Kudidu tooraduva hage abhinayisuvudannu nodidaga anisiddiste Janapriya agutte anoo onde karanakke ondu Pavitra Kale yannu istu keelu mattakke ilisuttare alva .. nijakko idu
"ಸಾಂಸ್ಕೃತಿಕ ಅಪರಾಧ"

Shree said...

ಯಕ್ಷಗಾನಕ್ಕೆ ಇಷ್ಟು ಹೊತ್ತಿನ ನಂತರ ಆಡಬಾರದು ಅಂತ ಲಿಮಿಟೇಶನ್ಸ್ ಹಾಕಿರುವುದು, ಸದಭಿರುಚಿಯ ಯಕ್ಷಗಾನಕ್ಕೆ ಪ್ರೇಕ್ಷಕರು ಕಡಿಮೆಯಾಗುತ್ತಿರುವುದು, ಈ ಕಲೆಯ ಭಾಗವಾಗಲಿಕ್ಕೂ ಆಸಕ್ತಿಯಿಲ್ಲದಿರುವುದು - ಎಲ್ಲವೂ ಇಂತಹ ಬೆಳವಣಿಗೆಗಳಿಗೆ ಕಾರಣ ಅಂತ ನನ್ನ ಅನಿಸಿಕೆ. ಇನ್ನು ಸ್ವಲ್ಪ ವರ್ಷ ಕಳೆದ ಮೇಲೆ ಇದು ಯಕ್ಷಗಾನ ಅಂತ, ನಾವು ಚಿಕ್ಕವರಾಗಿದ್ದಾಗ ನೋಡುತ್ತಿದ್ದೆವು ಅಂತ ನಮ್ಮ ಮಕ್ಕಳಿಗೆ ಫೋಟೋ ತೋರಿಸುವ ಪರಿಸ್ಥಿತಿ ಬರಲಿಕ್ಕಿದೆ. ಯಕ್ಷಗಾನ ಕಲಾವಿದರಿಗೂ ಸ್ಟಾರ್ ವ್ಯಾಲ್ಯೂ ಇದ್ದ ದಿನಗಳಿತ್ತು, ಅದೆಲ್ಲ ನಿಧಾನವಾಗಿ ಚರಿತ್ರೆಯಲ್ಲಿ ಸೇರಿಹೋಗುತ್ತಿದೆ. ಇಂತಹ ಸಮಯದಲ್ಲಿ ಹೊಸ ಪ್ರಯೋಗಗಳಿಂದಾದರೂ ಜನ ಆಕರ್ಷಿತರಾಗಲೆಂದು ಈರೀತಿಯ ಪ್ರಯೋಗಗಳು ಮಾಡುತ್ತ ಒದ್ದಾಡುತ್ತಿದ್ದಾರೇನೋ? ಹಾಗೇ ಆಗಿದ್ದಲ್ಲಿ ಉದ್ದೇಶ ಚೆನ್ನಾಗಿದೆ, ಆಯ್ದುಕೊಂಡ ದಾರಿ ಮಾತ್ರ ಅಷ್ಟು ಇಷ್ಟವಾಗಲಿಲ್ಲ..