Thursday, January 24, 2008

ಮಸಾಲೆ ದೋಸೆ & art of living


ಮಸಾಲೆ ದೋಸೆ ಯಾರು ತಿ೦ದಿಲ್ಲಾ ಸ್ವಾಮಿ,ಬೆಂಗ್ಳೂರಿನಲ್ಲಾದ್ರೆ MTR,ವಿಧ್ಯಾರ್ಥಿ ಭವನದ ಮಸಾಲೆ , ಮೈಸೂರಿನಲ್ಲಿ GTR,ಮೈಲಾರಿ ಮಸಾಲೆ ,ಪುತ್ತೂರಿನಲ್ಲಾದ್ರೆ ಹರಿ ಪ್ರಸಾದ್ ಮಸಾಲೆ ಹೀಗೆ ಒಂದೊಂದು ಊರಿನಲ್ಲಿ ಮಸಾಲೆ ದೋಸೆಗೆ ಒಂದೊಂದು special ಹೋಟೆಲ್ ಗಳು.
ನೀವು ಇಡೀ ಲೈಫ್ ನಲ್ಲಿ ಎಷ್ಟು ಮಸಾಲೆ ದೋಸೆ ತಿ೦ದಿದೀರಾ? ಯಾವತ್ತಾದ್ರು ನೀವು ಮಸಾಲೆ ತಿನ್ನೋವಾಗ ಅಥವಾ ಬೇರೆ ಯಾರಾರು ತಿನ್ನೋವಾಗ ಅವರು ಯಾವ ತರಹ ಮಸಾಲೆ ತಿಂತಾರೆ ಅಂತ observe ಮಾಡಿದ್ದೀರಾ?ಇಲ್ವಾ ಹಂಗಾರೆ ಇನ್ನು ಸ್ವಲ್ಪ observe ಮಾಡಿ ಅವರ ಬಗ್ಗೆ ತುಂಬಾ ವಿಷಯ ತಿಳ್ಕೋಬಹುದು.


  • ಸುತ್ತಿರುವ ಮಸಾಲೆ ದೋಸೆಯನ್ನ ಹರಡಿ open ದೋಸೆ ತರಹ ಮಾಡಿ ತಿನ್ನೋರು: ಈ ತರಹ ಮಸಾಲೆ ದೋಸೆ ತಿನ್ನೋರು life alli ತಮ್ಮ ಬಗ್ಗೆ ಯಾವುದೇ ವಿಷ್ಯ ಮುಚ್ಚಿಡೋದಿಲ್ಲ ಅವರ ಜೊತೆ ದೋಸ್ತರಾಗಿದ್ರೆ ನಿಮಗೆ ಅವರ ಬಗ್ಗೆ ಎಲ್ಲ ತಿಳಿದಿರೊತ್ತೆ.


  • ಎರಡೂ ಬದಿಯಿಂದ ದೋಸೆಯನ್ನ ತಿನ್ನೋಕೆ ಶುರುಮಾಡಿ ಕೊನೆಗೆ ಪಲ್ಯ ತಿನ್ನೋರು: ಈ ತರಹ ಮಸಾಲೆ ದೋಸೆ ತಿನ್ನೋರು life alli ತಮಗೆ ಸಿಗಬೇಕಾದ ಸಂತೋಷ/Excited things ಗೋಸ್ಕರ ಕಾಯಲು ಇಷ್ಟ ಪಡೋರು.ಆದ್ರೆ ಆ ಸಂತೋಷ ಬರೋ ಹೊತ್ತಿಗೆ ಅದರ ಬಗ್ಗೆ ಕಾದು ಕಾದು ಸುಸ್ತಾಗಿ ಅದನ್ನ ಅನುಭವಿಸೊಲ್ಲ ಅಥವಾ ಅದರ ಬಗ್ಗೆ interest ಕಳ್ಕೋಂಡಿರ್ತಾರೆ.ಇವರು ಅವ್ರ ಜೀವನದಲ್ಲಿ ಎನೂ ವಿಶೇಷ ಇಲ್ಲದೇ ಖಾಲಿ ಖಾಲಿ ಆಗಿ ನಡೆಯುತ್ತೆ.ಇವರಿಗೆ ಜೀವನದಲ್ಲಿ ಬರೋ ಸಣ್ಣ ಸಣ್ಣ ಸಂತಸಗಳನ್ನ ಅನುಭವಿಸಬೇಕು ಅನ್ನೋ idea ನೇ ಇಲ್ಲ. ಇವರಲ್ಲಿ ಎರಡುಬಗೆಯ ಜನರಿದ್ದಾರೆ

    • ಪಲ್ಯವನ್ನ ಪೂರ್ತಿ ತಿನ್ನದೇ ಬಿಡೋರು:ಈ typeನವರಿಗೆ ಜೀವನದ ಕಹಿಗೆ ಒಗ್ಗಿ ಒಗ್ಗಿ,ಕಷ್ಟ ಪಟ್ಟು ಪಟ್ಟೂ life ನಲ್ಲಿ ಎನೇ ಸಂತಸ ಸಿಕ್ಕಿದರೂ ಅದರ ಬಗ್ಗೆ ತಲೆ ಕೆಡಿಸದೇ ತಮ್ಮ ಪಾಡಿಗೆ ಇದ್ದುಬಿಡ್ತಾರೆ ಒ೦ಥರಾ ಸ್ಥಿತಪ್ರಜ್ನರ೦ತೆ.ಇವರು life ನಲ್ಲಿ ಸಂತಸ ಅಂತಾ ಅನುಭವಿಸುವುದೇ ಇಲ್ಲ.

    • ಕೊನೆಗೆ ಉಳಿದ ಚೂರು ದೋಸೆಯೊಂದಿಗೆ ಪೂರ್ತಿ ಪಲ್ಯವನ್ನ ಖಾಲಿ ಮಾಡೋರು::ಈ typeನವರು ತಾವು ಸಂತಸಕ್ಕಾಗಿ ಇಷ್ಟು ಕಾದಿದೀವಿ ಅಂತ ಆ ಕಾಯುವಿಕೆ ಯ frustrationನ್ನ ಸಿಕ್ಕ ಸಂತಸವನ್ನ ಮುಂದೆ ಏನೂ ಸಂತಸ ಸಿಗೋದಿಲ್ವೇನೋ ಅನ್ನೋ ರೀತಿಲಿ maximum enjoy ಮಾಡಿ ತೀರಿಸುತ್ತಾರೆ.


  • ದೋಸೆಯ ಮಧ್ಯೆ ಕನ್ನ ಹಾಕಿ ಪಲ್ಯದಿಂದ ಶುರುಮಾಡಿ ಎರಡೂ ಬದಿಯ ಖಾಲಿ ದೋಸೆ ಕಡೆ ಸಾಗುವವರು:ತಮ್ಮ ಜೀವನದಲ್ಲಿ ಎನೇನು ಸಂತಸ ಸಿಗೋತ್ತೋ ಅದು ಈಗ್ಲೆ ಸಿಗಲಿ ಆನ್ನೋ ಮನೋಭಾವದ ಇವರು ತಮ್ಮ ಸಂತಸವನ್ನೇಲ್ಲಾ ಅವಸರ ಅವಸರವಾಗಿ ಕಳೆದು ತಮ್ಮ ಜೀವನದ ಬಹಳಷ್ಟು ಕಾಲವನ್ನ ನಿರಾಸೆಯಲ್ಲಿ ಕಳೆಯುತ್ತಾರೆ.ತಮ್ಮ ಜೀವನದಲ್ಲಿ ಬಹಳ ಬೇಗ burn out ಆಗಿ ಉತ್ಸಾಹವನ್ನ ಕಳ್ಕೋತಾರೆ ಇವರಲ್ಲಿ ಎರಡುಬಗೆಯ ಜನರಿದ್ದಾರೆ

    • ದೋಸೆಯನ್ನ ಪೂರ್ತಿ ತಿನ್ನದೇ ಬಿಡೋರು:ಈ typeನ ಜನ ಪಾಪ ನಿಜಕ್ಕೂ ಅತ್ಯ೦ತ ನಿರಾಶಾವಾದಿಗಳು.ಅವರು ಜೀವನದಲ್ಲಿ ಕಷ್ಟ ಬ೦ದ ಕೂಡಲೇ ಜೀವನವನ್ನ ಮುಗಿಸೋ ಯೋಚನೆ ಮಾಡುತ್ತಾರೆ.ಇವರಿಗೆ ಜೀವನದಲ್ಲಿ ಸುಖ ಮಾತ್ರ ಬೇಕು.ಆದ್ರೆ ಪ್ರಪ೦ಚದಲ್ಲಿ ಕಷ್ಟವಿಲ್ಲದ ಜೀವನ ಮಾತ್ರ ಇಲ್ಲವೇ ಇಲ್ಲ.ಕೆಲವರು ಕಷ್ಟವನ್ನ ಸಹಿಸೋದನ್ನ ಕಲಿತಾರಾದ್ರೂ ಬಹಳಷ್ಟು ಜನ ಮಾತ್ರ ಕಲಿಯೋ ಪ್ರಯತ್ನನೇ ಮಾಡಲ್ಲ.

    • ದೋಸೆಯನ್ನ ಪೂರ್ತಿಖಾಲಿ ಮಾಡೋರು:ಈ typeನವರು typical ನರ ಮಾನವರು.ತಮ್ಮ ಜೀವನದ ಸಂತಸವನ್ನ maximum enjoy ಮಾಡಿ , ಮು೦ದೆ ಬರುವ ಎಲ್ಲ ಕಷ್ಟಗಳನ್ನ ಕಳೆದ ಸ೦ತಸದ ನೆನಪಲ್ಲಿ ದೂಡುತ್ತಾರೆ.ಈ ರೀತಿ ತಿನ್ನೋರು ತಟ್ಟೆಲಿ ಎನೂ ಉಳಿಸಿರಲ್ಲ,ಜೀವನದಲ್ಲೂ ಅಷ್ಟೆ ಎಲ್ಲಾದಕ್ಕೂ ಸಿದ್ಧರಾಗಿ ಅನುಭವಿಸುತ್ತಾರೆ.ಅವರಿಗೆ ಜೀವನದಲ್ಲಿ ಬರಿ ಸ೦ತಸ ಮಾತ್ರವಲ್ಲ ದು:ಖವೂ ಇದೆ ಅನ್ನೋದು ಗೊತ್ತಿದೆ.



  • ಇರೋ ಪಲ್ಯ ಇಡೀ ಮಸಾಲೆ ದೋಸೆಗೆ ಸಾಕಾಗುವ೦ತೆ ನೆ೦ಚಿಕೊ೦ಡು ತಿನ್ನೋರು: ಈ ತರಹದವರು ಬಹಳ ಅಪರೂಪ.ಇವರನ್ನ ನೋಯಿಸುವುದೂ ಮತ್ತು ಸಂತಸಪಡಿಸೋದು ತು೦ಬಾ ಕಷ್ಟ.ಅವರು ಕಷ್ಟ ಸುಖವನ್ನ ಜೀವನದಲ್ಲಿ balance ಮಾಡ್ಕೊ೦ಡು ಹೋಗ್ತಾರೆ.ಆದ್ರೆ ಅವ್ರು ಈ balance ನ ಬೇರೆಯವರು ಕೆಡಿಸಬಹುದು ಅನ್ನೋ ಕಾರಣಕ್ಕೆ ಏಕಾ೦ಗಿಯಾಗಿರೋ chance ಜಾಸ್ತಿ.


  • ಯಾರ ಜೊತೆಗೂ ಮಸಾಲೆ ದೋಸೆ ಹ೦ಚಿಕೊಳ್ಳದೇ ಈ ಮಸಾಲೆ ದೋಸೆ ಬಹಳ precious ಅ೦ತಾ ತಿನ್ನೋರು : ಈ ತರಹದವರು ತಮ್ಮ ಬಗ್ಗೆ ಬಹಳ protective.ತಮ್ಮ ನಿಜವಾದ ಬಣ್ಣ ಯಾರಿಗೂ ಗೊತ್ತಾಗದ೦ತೆ ಎಲ್ಲರನ್ನೂ ತಮ್ಮ ಉಪಯೋಗಿಸ್ಕೋತಾರೆ.ಯಾರು ಅವರ ಜೀವನದಲ್ಲಿ ಮೂಗು ತೂರಿಸೊದು ಅವರಿಗೆ ಇಷ್ಟ ಇಲ್ಲ.


  • ಮೊದಲು ಜೊತೆಯಲ್ಲಿರಿರುವರಿಗೆ ತುತ್ತು ತಿನ್ನಲು ಬಿಟ್ಟು ನ೦ತರ ತಾವು ಮಸಾಲೆ ದೋಸೆ ತಿನ್ನೋರು : ಈ ತರಹದವರು overly friendly.ತಮ್ಮ ಗೆಳೆಯರು/ಕುಟು೦ಬ/group ತಮಗಿ೦ತ ಮುಖ್ಯ ಅ೦ತ ತಿಳಿದವರು.ತಾವು ಜೊತೆಗಿದ್ದು ಎಲ್ಲರಿ೦ದಲೂ ಒಳ್ಳೆಯದಾಗಲಿ,ಎಲ್ಲರಿಗೂ ಒಳ್ಳೆಯದಾಗಲಿ ಅ೦ತಾ ಆಶಿಸುವವರು.


  • ಮೊದಲು ತಾವು ಒ೦ದೆರಡು ತುತ್ತು ತಿ೦ದು ಜೊತೆಯಲ್ಲಿರಿರುವರಿಗೆ ಉಳಿದದ್ದನ್ನ ತಿನ್ನಲು ಬಿಡೋರು: ಈ ತರಹದವರು ತಮ್ಮ ಗೆಳೆಯರು/ಕುಟು೦ಬ/group ಬಗ್ಗೆ care ತಗೊ೦ತಾರಾದರೂ group ಜೊತೆ set ಆಗಲು time ತಗೋತಾರೆ.ಆದ್ರೆ ಒಮ್ಮೆ set ಆಗ್ಬಿಟ್ರೆ ಮಾತ್ರ ನಿಮ್ಮ ಜೊತೆಗೆ ಯಾವತ್ತೂ ಇರುತ್ತಾರೆ.ಅವರು ಯಾವತ್ತು sidelines ಅಲ್ಲಿ ಇರೋ ಪ್ರಯತ್ನ ಮಾಡುತ್ತಾರಾದ್ರೂ ಎನೇ ನಿರ್ಧಾರ ತಗೊಬೇಕಾದ್ರು ಸಿಕ್ಕಾಪಟ್ಟೆ ಯೋಚನೆ ಮಾಡ್ತಾರೆ.


  • ಮೊದಲು ತಾವು ತಿ೦ದು ತಮ್ಮ ಹೊಟ್ಟೆ ತು೦ಬಿದಾಗ ಜೊತೆಯಲ್ಲಿರಿರುವರಿಗೆ ಉಳಿದದ್ದನ್ನ ತಿನ್ನಲು ಬಿಡೋರು: ಈ ತರಹದವರು selfish ಆದ್ರೂ ಜಿಪುಣರಲ್ಲ,ಆಸೆ ಬುರುಕರಲ್ಲ.ತಮ್ಮ ಎಲ್ಲ ಅಗತ್ಯ ಮೊದಲು ಪೂರೈಸಿ ನ೦ತರ ಉಳಿದಿದ್ದನ್ನ ಬೇರೆಯವರಿಗೆ ಕೊಡೂತ್ತಾರೆ.ಆದ್ರೆ ಯಾವತ್ತೂ ಇವರು ತಮ್ಮ ಅಗತ್ಯಕ್ಕಿ೦ತ ಹೆಚ್ಚು ತಿನ್ನಲ್ಲ ಅಥವಾ ಹಸಿದೂ ಕೂರಲ್ಲ.ಇವರು ನಿಮಗೆ lifeನಲ್ಲಿ best advice ಕೊಡಬಲ್ಲರು,ಅವರ advice ತರಹ ನಡ್ಕೊ೦ಡ್ರೆ ನಿಮಗೆ ಎನೂ problem ಅಗೊಲ್ಲ .


  • ತಾವು ಮಸಾಲೆ ದೋಸೆ ತರಿಸಿ ಅದನ್ನ ತಿನ್ನದೆ ಜೊತೆಯಲ್ಲಿರಿರುವವರ ತಟ್ಟೆಗೆ ಕೈ ಹಾಕೋರು: ಇವರಿಗೆ ತಮಗೆ ಏನು ಬೇಕು ಅ೦ಥಾ ಗೊತ್ತಿದ್ರೂ ಅದು ಸಿಕ್ಕಿದ್ರೂ ಅದನ್ನ ಅನುಭವಿಸುವುದಿಲ್ಲ. ಆದನ್ನ ಬಿಟ್ಟು ತಮಗೆ ಯಾವುದು ಅಗತ್ಯವನ್ನ ಪೂರೈಸುತ್ತದೋ ಅದ್ರೆ ಯಾವುದು ತಮ್ಮನ್ನ complete satisfy ಮಾಡಲ್ವೋ ಅದನ್ನ ಆರಿಸಿಕೊಳ್ತಾರೆ.ಇವರು lifeನಲ್ಲಿ ಸೋಲಲೆ೦ದೇ ಹುಟ್ಟಿದವರು ಅವರಿಗೆ ಯಾವುದು ಬೇಕು ಅದು ಅವರಿಗೆ ಸಿಕ್ಕಿದ್ರೂ ಅದನ್ನ ತಮ್ಮ ಬಳಿಯೇ ಇಟ್ಟುಕೊಳ್ಳಲು ಬರದವರು


  • ತಾವು ಮಸಾಲೆ ದೋಸೆ ತರಿಸದೇ ಜೊತೆಯಲ್ಲಿರಿರುವವರ ತಟ್ಟೆಗೆ ಕೈ ಹಾಕೋರು: ಇವರಿಗೆ ತಮಗೆ ಏನು ಬೇಕು ಅ೦ಥಾ ಗೊತ್ತಿದ್ರೂ ಅದಕ್ಕೊಸ್ಕರ ಕಷ್ಟಪಡದೇ ಇರಲು ಬಯಸುವವರು.ಬೇರೆಯವರು ಅದಕ್ಕೊಸ್ಕರ ಕಷ್ಟಪಡಲಿ ಅ೦ತ ಯೋಚನೆ ಮಾಡ್ತಾರೆ.ಇವರು lifeನಲ್ಲಿ ಗೆದ್ದೇ ಗೆಲ್ಲುತ್ತಾರೆ.(ಒ೦ಥರಾ software field ನ ideal manager ಇದ್ದ೦ಗೆ.)




ನಿಮ್ಮ ಜೊತೆ next time ಯಾರಾದ್ರು ಮಸಾಲೆ ದೋಸೆ ತಿನ್ನಬೇಕಾದ್ರೆ ಸ್ವಲ್ಪ ಗಮನಿಸಿ ಅವ್ರು ಯಾವ type ಮನುಷ್ಯ ಅ೦ತಾ ಗೊತ್ತಾಗಬಹುದು .ಆದ್ರೆ ಈ post ಓದಿ ತಮ್ಮ ಮಸಾಲೆ ದೋಸೆ ತಿನ್ನೊ style ಬದಲಾಯಿಸಿದ್ರೆ ನನ್ನನ್ನ ಬೈಯ್ಯಬೇಡಿ.

17 comments:

Anonymous said...

ಲೇಖನ ಚೆನ್ನಾಗಿದೆ. ನಿಮ್ಮ ಬ್ಲಾಗಿನ ಹೆಸರೂ ತುಂಬಾ ಚೆನ್ನಾಗಿದೆ
~ಅಪಾರ

Anonymous said...

ek masaal dosaa se itnaa saraa analysis. kamaal hai bhaiyaa. i dont like people eating Masala Dosa with fork.(that includes my brother)
Good and enjoyable post. will be back later to savor in peace. BEWARE
Bye
:-)

ಅನಿಕೇತನ said...

The crispiness of dosa with chutney is just inviting. I think I will shell out 1300 Yen to have masala dosa here (Tokyo).. It's very inviting :)

ಸುಪ್ತದೀಪ್ತಿ suptadeepti said...

ಒಳ್ಳೆ ಕುತೂಹಲಕಾರಿ ಬರಹ.
ನಾನು ಗಮನಿಸಿದ್ದಂತೆ ಒಂದು ರೀತಿ ಇಲ್ಲಿ ದಾಖಲಾಗಿಲ್ಲ:- ಒಂದು ಬದಿಯಿಂದ ದೋಸೆ ತಿನ್ನುತ್ತಾ, ನಡುವಿನ ಮಸಾಲೆ+ದೋಸೆಯನ್ನು ಸವಿದು, ಮತ್ತೊಂದು ಬದಿಯ ದೋಸೆಯಲ್ಲಿ ಮುಗಿಸುವವರು: ಯಾವ ಗುಂಪಿಗೆ ಸೇರುತ್ತಾರೆ?

Sanath said...

@suptadepti,
ಒಂದು ಬದಿಯಿಂದ ದೋಸೆ ತಿನ್ನುತ್ತಾ, ನಡುವಿನ ಮಸಾಲೆ+ದೋಸೆಯನ್ನು ಸವಿದು, ಮತ್ತೊಂದು ಬದಿಯ ದೋಸೆಯಲ್ಲಿ ಮುಗಿಸುವವರು: ಇವರನ್ನ ಸ೦ತಸಕ್ಕೆ ಕಾದು ಅದನ್ನ ಅನುಭವಿಸಿ ನ೦ತರ ಆ ಸ೦ತಸದ ನೆನಪಿನಲ್ಲಿ ಇರುವವರು ಅನ್ನ ಬಹುದು .

ಈ ರೀತಿ ತಿನ್ನೋರು ಎರಡೂ ಬದಿಯಿಂದ ದೋಸೆಯನ್ನ ತಿನ್ನೋಕೆ ಶುರುಮಾಡಿ ಕೊನೆಗೆ ಪಲ್ಯ ತಿನ್ನೋರು + ದೋಸೆಯ ಮಧ್ಯೆ ಕನ್ನ ಹಾಕಿ ಪಲ್ಯದಿಂದ ಶುರುಮಾಡಿ ಎರಡೂ ಬದಿಯ ಖಾಲಿ ದೋಸೆ ಕಡೆ ಸಾಗುವವರು ಇವರ hybrid ಅನ್ನಬಹುದು ...ಎನ೦ತೀರಾ ?

@rajeev,
ನಿಮಗೆ ಮಸಾಲೆ ದೋಸೆ ತಿ೦ದ್ರಾ ? ಹೇಗಿತ್ತು ?
@ಅಪಾರ,@anonymus
thank u

hamsanandi said...

ಹ್ಹ ಹ್ಹ! ಚೆನ್ನಾಗಿದೆ! ಈಗ ಹೊಟ್ಟೆ ಹಸೀತಿದ್ದಿದ್ದು, ನೀವು ಹಾಕಿರೋ ದೋಸೆ ಚಿತ್ರ ನೋಡಿದಮೇಲೆ, ಇನ್ನೂ ಹೆಚ್ಚಿಹೋಯಿತು !

-ಹಂಸಾನಂದಿ

hamsanandi said...

ಹ್ಹ ಹ್ಹ! ಚೆನ್ನಾಗಿದೆ! ಈಗ ಹೊಟ್ಟೆ ಹಸೀತಿದ್ದಿದ್ದು, ನೀವು ಹಾಕಿರೋ ದೋಸೆ ಚಿತ್ರ ನೋಡಿದಮೇಲೆ, ಇನ್ನೂ ಹೆಚ್ಚಿಹೋಯಿತು !

-ಹಂಸಾನಂದಿ

Subhash said...

ಸಖತ್ hot ಮಗಾ!!

click4nothing said...

ತುಂಬ ಚೆನ್ನಾಗಿ ಅನಾಲಿಸಿಸ್ ಮಾಡಿದ್ದೀರ... ನಿಮ್ಗೆ ಪಿಎಚ್ಡಿ ಕೊಡೆಬೇಕಿತ್ತು..... :)

ನಿಮ್ಮ ರಿಸರ್ಚ್ ಇನ್ನು ಯಾವ ಯಾವ ವಿಷಯಗಳಮೇಲೆ ಮುಂದುವರಿಯುತ್ತಿದೆಯೋ?

Archu said...

hello,
lekhana bahaLa chennagide!!
:)
cheers,
archana

Anonymous said...

Nice stuff marayare

ಕೃಪಾ said...

Sanath,

Ninu yavthara Masala Dose thinnodu?

ಕೃಪಾ said...

Sanath,

Ninu yavthara Masala Dose thinnodu?

Divs said...

ee analysis ge ulta analysis bardidru nan friend obru.. copyright keli prolly post madthini.. :)

ದೀಪಸ್ಮಿತಾ said...

ಮಸಾಲೆ ದೋಸೆ philisophy. ಚೆನ್ನಾಗಿದೆ :-)

Pramod P T said...

ಹ್ಹ ಹ್ಹ! ಸೂಪರ್ analysis!!

ನಾನು ಯಾವಾಗ್ಲು ದೋಸೆಯ ಮಧ್ಯೆ ಕನ್ನ ಹಾಕಿ ಪಲ್ಯದಿಂದ ಶುರುಮಾಡಿ ಎರಡೂ ಬದಿಯ ಖಾಲಿ ದೋಸೆ ಕಡೆ ಸಾಗುವವನು. ಆದ್ರೆ ಪ್ಲೇಟ್ನಲ್ಲಿ ಎನೂ ಉಳ್ಸಲ್ಲಾ :)
(ಯಾರೂ ಎನೂ ಅಂದ್ಕೋಬೇಡ್ರಪ್ಪಾ :))

ಪ್ರಮೋದ್

Venkatesh Dodmane said...

Exlnt!

ತು೦ಬಾ ಚೆನ್ನಾಗಿದೆ, thanks for posting.