Monday, September 18, 2006

ಐಶ್ವರ್ಯ

"ಮದ್ಯಪಾನ , ಧೂಮಪಾನ , ಹೆಣ್ಣಿನ ಧ್ಯಾನ ಇವನೆಲ್ಲಾ ಅಷ್ಟು ಸುಲಭವಾಗಿ ಬಿಡೊಕಾಗೊಲ್ಲ"
"ಎಲ್ಲಾ OK ಮದುವೆ ಯಾಕೆ..ಏಳು ಹೆಜ್ಜೆ ನಡೆದಿದಕ್ಕೆ ಏಳು ಜನ್ಮದ ಶಿಕ್ಷೆ ನಾ.."
ಇದೆಲ್ಲಾ ಉಪ್ಪಿಯ ಗೀತೊಪದೇಶ ಹೆಣ್ಣಿನ ಬಗ್ಗೆ....ಯಾವುದ್ರಲ್ಲಿ ಅಂತೀರಾ so called STAR DIRECTOR ಇಂದ್ರಜಿತ್ ಲಂಕೇಶ್ ನ ಹೊಸ ಚಿತ್ರ "ಐಶ್ವರ್ಯ"ದಲ್ಲಿ. ಉಪ್ಪಿ ಹೊಸ hair style , ಮಾಡೆಲ್ ಕಂ heroine ದೀಪಿಕಾ ಪಡುಕೋಣೆ ಬಿಟ್ಟರೆ ಚಿತ್ರದಲ್ಲಿ ಹೊಸತು ಎನು ಇಲ್ಲ . simply ಹಳೆ ಹಳಸಿದ ಹೆಂಡ ಇನ್ NEW ಬಾಟಲಿ .

ಅಭಿಷೇಕ್ ಹೆಗ್ದೆ ಅಲಿಯಾಸ್ ಅಭಿ(ಉಪ್ಪಿ in new ..ultra new hairstyle) ಒಬ್ಬ ad agency manager. ಮೊದಲು ಪ್ರೀತಿ ಮಾಡಿದ ಹುಡುಗಿ (ಡೈಸಿ ಬೋಪಣ್ಣ) ಕೈ ಕೊಟ್ಟಿದ್ದಕ್ಕೆ ಸ್ತ್ರಿ -ದ್ವೇಷಿ ಯಾಗುತ್ತಾನೆ. ಅಗ ಅವನ ಆಫೀಸ್ ಗೆ assistant manager ಆಗಿ ಬರೋದೇ ಐಶ್ವರ್ಯ(ದೀಪಿಕಾ ಪಡುಕೋಣೆ ) . ಮೊದಲು ದ್ವೇಷ ..ನಂತರ ಪ್ರೀತಿ. ಉಪ್ಪಿ ಇನ್ನೇನು ಪ್ರೀತಿ ವಿಷಯ ಹೇಳಬೇಕು..ನಾಯಕಿಗೆ ಮಂಡ್ಯ ಹುಡುಗನೊಂದಿಗೆ ಮದುವೆ ನಿಶ್ಚಯ ಆಗಿರುತ್ತದೆ.ಮದುವೆ ದಿನ ಬೆಳಗ್ಗೆ ನಾಯಕಿ ನಾಯಕನಿಗೆ ಫೋನ್ ಮಾಡಿ I LOVE YOU ಅನ್ನುತ್ತಾಳೆ.
ನಾಯಕ ಅವಳಿಗೊಸ್ಕರ ಮದುವೆ ಮಂಟಪಕ್ಕೆ ಹೊರಡುತ್ತಾನೆ. ಅರ್ಧ ದಾರಿ ಯಲ್ಲಿ ನಾಯಕಿ -ನಾಯಕ ಭೇಟಿ ಆಗಿ ಸುಖಾಂತ.

ಈ ಕಥೆಗೆ ಹೊಸತನ ತರುವುದೇ ಡೈಸಿ ಮತ್ತು ದೀಪಿಕಾ. ಇಂದ್ರಜಿತ್ ಗೆ ನಾಯಕಿಯರ ಗ್ಲಾಮರ್ ಮತ್ತು ನಾಯಕನ ಇಮೇಜ್ ಎರಡನ್ನೂ ಬಳಸಿ ಪ್ರಚಾರಗಿಟ್ಟಿಸುವ ಕಲೆ ಗೊತ್ತಿದೆ.ಇದರಿಂದಲೆ ಚಿತ್ರಕ್ಕೆ ಇಷ್ಟು ಹೈಪ್ ಸಿಕ್ಕಿದ್ದು.ನಾಯಕಿಯ ಭಾವೀ ಮೈದುನನಾಗಿ ಬರುವ ಕೊಮಲ್ ಕುಮಾರ್ ಇರುವ 20 ನಿಮಿಷ ಚಿತ್ರದ ಹೈಲೈಟ್. thanx to ಕೊಮಲ್ ಕುಮಾರ್ .

ಅರ್ಧ ಗಂಟೆ ಚಿತ್ರ ನೋಡಿದ ಮೇಲೆ ಮುಂದಿನ ಕಥೆ ನೀವು expect ಮಾಡಿದಂತೆ ಸಾಗುತ್ತದೆ. ಉಪ್ಪಿ ಅಭಿಮಾನಿಗಳೆ ಮೊದಲ ಅರ್ಧ ಗಂಟೆಲಿ ಉಪ್ಪಿ dialogue ಮುಗಿದು..ಶುರುವಿನಲ್ಲಿ ಸಿಹಿಯಾದ chewing gum ನಂತರ ಸಪ್ಪೆ ಆದಂತೆ ಚಿತ್ರ ಸಾಗುತ್ತದೆ.

ಎಚ್ಚರಿಕೆ : ಇದು ಉಪ್ಪಿ ಚಿತ್ರ ಅಂತ ಉಳಿದ ಉಪ್ಪಿ ಚಿತ್ರಗಳ ತರಹ ಇರಬಹುದು ಅಂತ expectationಗಳು ದಯವಿಟ್ಟು ಬೇಡ.
ಚಿತ್ರ ಹಿಟ್ ಆದರೆ ಅದಕ್ಕೆ ಕಾರಣ ಡೈಸಿ ಮತ್ತು ದೀಪಿಕಾ ಗ್ಲಾಮರ್ ಮತ್ತು ಉಪ್ಪಿ ಇಮೇಜ್ ಹೊರತು ಇಂದ್ರಜಿತ್ ನಿರ್ದೇಶನ ಅನ್ನೊ ಭ್ರಮೆ ಬೇಡ.

ಇಂದ್ರಜಿತ್ ಗೆ ವಿನಂತಿ: ತಮ್ಮ ಮುಂದಿನ ಚಿತ್ರಕ್ಕೆ ನಾಯಕ ನಾಯಕಿರನ್ನು ಆಯ್ಕೆ ಮಾಡುವ ಸಮಯದ 1% ಆದರೂ ಕಥೆಗೆ ನೀಡಿ.

No comments: