Wednesday, September 20, 2006

ಇವತ್ತು ನಾನು ಬಹಳ ಅತ್ತುಬಿಟ್ಟೆ

ಚಿನ್ನಾ,
ಇವತ್ತು ನಾನು ಬಹಳ ಅತ್ತುಬಿಟ್ಟೆ.
ನಿನ್ನ ಮಿಸ್ ಮಾಡಿಕೊಳ್ಳುತ್ತಿರುವುದಕ್ಕೆ ಅಲ್ಲ.
ನಿನ್ನ ನೆನಪಾಗುತ್ತಿರುವುದಕ್ಕಾಗಿ ಅಲ್ಲ.
ನಿನ್ನ ನಗು ನನ್ನನ್ನ ಕಾಡಿಸುವುದಕ್ಕಾಗಿಯೂ ಅಲ್ಲ.
ನಿನ್ನ ಬಿಂಬ ಕಣ್ಣಲ್ಲಿರುವುದಕ್ಕಾಗಿಯೂ ಅಲ್ಲ.
ನಿನ್ನ ಬಿಟ್ಟು ಬದುಕಲು ಸಾಧ್ಯವಾಗಿರುವುದಕ್ಕೆ...

(ಕನ್ನಡ ಶಾಯರಿಯ ಸಾಗರಕ್ಕೆ ನನ್ನದೊಂದು ಹನಿ ಕಾಣಿಕೆ)

No comments: