Monday, June 05, 2006

ಓಣ ಮಹೋತ್ಸವ

Today is World Environment Day!
...take pride in the flowering trees, the green shrubs, all of which house many of nature’s smaller creatures.
ಅಂತ ಓದಿದಾಗ ಶಾಲೆಯಲ್ಲಿ ನಡೆಸುತ್ತಿದ್ದ ವನ ಮಹೋತ್ಸವ (ಸದಾ ತುಳು ಭಾಷೆ ಯ ಬಳಕೆಯಿಂದಲೋ ಎಂಬಂತೆ ಹುಡುಗರ ಬಾಯಲ್ಲಿ ಓಣ ಮಹೋತ್ಸವ ) ನೆನಪಿಗೆ ಬಂತು.ಪ್ರತಿ ವರ್ಷ ಜುಲೈತಿಂಗಳಲ್ಲಿ ಆಚರಿಸುವ ಈ ದಿನ ನಾವು ಶಾಲೆಗೆ ಮನೆ ಯಿಂದ ಒಂದೊಂದು ಗಿಡ ಒಯ್ದು ನೆಡುತ್ತಿದ್ದೆವು.ಮನೆ ಯಿಂದ ಗಿಡ ತೆಗೆದುಕೊಂಡು ಹೊಗಬೇಕಾದರೆ ಅಮ್ಮ ಬೈಯುತ್ತಿದ್ದಳು-"ಸುಮ್ಮನೆ ಆ ಅಹಮ್ಮದ್ ಬ್ಯಾರಿಯ ಆಡುಗಳಿಗೆ ನೈವೇದ್ಯಕ್ಕೆ ಒಳ್ಳೆ ಗಿಡ ತೆಗೆದುಕೊಂಡು ಹೊಗುವುದು ಬೇಡ."ಶಾಲೆ ಯ ಕೆಳಗೆ ಮನೆ ಇರುವ ಅಹಮ್ಮದ್ ಬ್ಯಾರಿ ಆಡು ಸಾಕಿರುವುದು ನಮ್ಮ ತಪ್ಪಾ?ಆಡುಗಳು ನಮ್ಮ ವನ ಮಹೋತ್ಸವ ದ ಗಿಡಗಳನ್ನು ತಿಂದರೆ ನಮ್ಮ ತಪ್ಪಾ?,ಗಿಡ ನೆಡಿಸಿದ ಟೀಚರ್ ಬೇಲಿ ಹಾಕಿಸದಿರುವುದು ನಮ್ಮ ತಪ್ಪಾ?...ಎನೇ ಇರಲಿ ನಾವಂತು ಪ್ರತೀ ವರ್ಷ ವನ ಮಹೋತ್ಸವದಂದು ಶ್ರಧ್ದೆ ಯಿಂದ ಗಿಡ ತೆಗೆದುಕೊಂಡು ಹೋಗಿ ನೆಡುತ್ತಿದ್ದೆವು... ಹಸಿರೇ ಉಸಿರು....

No comments: