ಅವಳು ಬೈಕ್ ಹಿಂದಿನ ಸೀಟ್ ನಿಂದ ಇಳಿದು ತನ್ನ ಕೂದಲನ್ನ ಸರಿಪಡಿಸಿ ಹಾಕಿದ್ದ ಟೀ-ಶರ್ಟ್ ಹಿಂಭಾಗ ಕೆಳಕ್ಕೆ ಜಗ್ಗುತ್ತಾ ನಿಂತಳು.ಅವಳೊಂದಿಗೆ ಬಂದ ಅವಳ boyfriend ಬೈಕ್ ಪಾರ್ಕ್ ಮಾಡಿ ಬಂದು ಅವಳ ಕೈ ಹಿಡಿದು ಮುನ್ನಡೆದ.ಇಬ್ಬರೂ ಮಾತನಾಡುತ್ತ coffe day ನ ಒಳಗೆ ಹೋಗಿ cold coffee orderಮಾಡಿ ಕೂತರು.ಇಬ್ಬರು ಪರಸ್ಪರ ದೃಷ್ಟಿಯುದ್ಧ ಮಾಡುತ್ತಾ ತಮ್ಮ ತಮ್ಮ ಆಫೀಸಿನ ಕೆಲಸದ ಬಗ್ಗೆ ಮಾತಾಡತೊಡಗಿದರು.ರಿಂಗುಣಿಸುತ್ತಿದ್ದ ಫೋನ್ ಹಿಡಿದು ಹೊರಗೆ ಬಂದ ಅವಳ boyfriend ಎನೋ ಗಹನವಾದ ವಿಚಾರವನ್ನ ತನ್ನ ಕೈ ಸನ್ನೆಗಳನ್ನೆಲ್ಲಾ ಬಲಸಿ ವಿವರಿಸುತ್ತಾ ಶತಪಥ ತಿರುಗುತ್ತಿದ್ದ.ಬಂದ cold coffee ಹೀರುತ್ತಾ ಆಚೀಚೆ ಕಣ್ಣ ಹಾಯಿಸುವಾಗಲೇ ತಿಳಿದಿದ್ದು ,ಎದುರಿನ ಟೇಬಲ್ ನಲ್ಲಿ ಕೂತ ಗೂಬೆಯೊಬ್ಬ ಅವಳನ್ನ ರೆಪ್ಪೆ ಮಿಟುಕಿಸದೇ ನೋಡುತ್ತಿದ್ದ. ಅವನ ನೋಟಕ್ಕೆ ಗಲಿಬಿಲಿಗೊಂಡ ಅವಳು ಅವನನ್ನ ದುರುಗುಟ್ಟಿದಳು.ಆದರೂ ಅವನು ರೆಪ್ಪೆ ಮಿಟುಕಿಸದೇ ಅವಳನ್ನ ನೋಡುತ್ತಲೇ ಇದ್ದ,ವೇಟರ್ ತಂದಿಟ್ಟ ಕಾಫಿಯನ್ನ ಕೂಡ ಗಮನಿಸದೇ.ಗಾಬರಿಗೊಂಡು ಅವಳು ತನ್ನ ಟೀ-ಶರ್ಟ್ ಮೇಲೆ ಜಗ್ಗುತ್ತಾ ಅವನು ತನ್ನನ್ನ ಈ ರೀತಿ ಯಾಕೆ ನೋಡುತ್ತಿದ್ದಾನೆ ಅಂತ ಯೋಚಿಸತೊಡಗಿದಳು.ಅವನ ಕಣ್ಣುಗಳು ಮಾತ್ರ ಅವಳನ್ನೇ ದುರುಗುಟ್ಟುತ್ತಿದ್ದವು.ಎರಡು ನಿಮಿಷ ಎನೆಲ್ಲಾ ಕಿತಾಪತಿ ಮಾಡುತ್ತಾ ಅವನ ಕಡೆ ಗಮನ ಹರಿಸುತ್ತಿಲ್ಲ ನಟಿಸಿದಳು.ಪುನಹ ಅವನೆಡೆಗೆ ನೋಡಿದರೆ ಆಗಲೂ ಅವನ ಕಣ್ಣುಗಳು ಅವಳೆಡೆಗೆ ನೆಟ್ಟಿದ್ದವು.ಅವಳು ಜರ್ಕಿನ್ ಧರಿಸಿ ಮೈ ಮಡಿಚಿ ಕೂತಳು,ವಿಧ ವಿಧ ಭಂಗಿ try ಮಾಡಿದಳು.
ಅವನ ಕಣ್ಣುಗಳು ಮಾತ್ರ ಅವಳನ್ನೇ ಸೆರೆ ಹಿಡಿಯುತ್ತಿದ್ದವು.
ಬೇಜಾರು ಬಂದು ಆಕೆ ತನ್ನ ಕುರ್ಚಿಯನ್ನು ತಿರುಗಿಸಿ ಅವನಿಗೆ ಬೆನ್ನು ಕೊಟ್ಟು TV ನೋಡುತ್ತಾ ಕೂತಳು.TV ಕಡೆ ಯಾಕೋ ಮನಸ್ಸಿರಲಿಲ್ಲ.ಅವನೆಡೆಗೆ ಕಳ್ಳನೋಟ ಬೀರಿದಳು.ಅವನ ಕಣ್ಣುಗಳು ಮಾತ್ರ ಅವಳನ್ನೇ ಸೆರೆ ಹಿಡಿಯುತ್ತಿದ್ದವು.ಅವಳ ಸಹನೆ ಮೀರಿತು, ಇಪ್ಪತ್ತು ನಿಮಿಷ ಅವನ ಕಣ್ಣೋಟ ಸಹಿಸಿದ್ದಳು.ಎದ್ದು ಹೋಗಿ ಅವನ ಕಪಾಳಕ್ಕೆ ಬಿಗಿದು "ಅಕ್ಕ ತಂಗೀರು ಯಾರು ಇಲ್ವಾ?" ಅಂತ ಕೇಳಿ ಬುಸುಗುಟ್ಟುತ್ತಾ ಮುನ್ನಡೆದಳು.ಫೋನ್ ಕರೆ ಮುಗಿಸಿ ಅವಳೆಡೆಗೆ ಬರುತ್ತಿದ್ದ boyfriend ಹತ್ರ ರೋಡ್ ರೋಮಿಯೋಗಳನ್ನ ಬೈಯುತ್ತಾ,coffee day ಬಾಗಿಲು ದಬ್ಬಿ ಹೊರನಡೆದಳು.
ಅವಳು ಹೊಡೆದ ರಭಸಕ್ಕೆ ಅವನ ಎರಡು ಕಣ್ಣುಗಳ ಜಾಗದಲ್ಲಿ ಜೋಡಿಸಿದ್ದ ಗಾಜಿನ ಕಣ್ಣುಗಳಲ್ಲೊಂದು ಕೆಳಗೆ ಬಿದ್ದಿತ್ತು.ಅವನು ಕೆಳಗೆ ಬಗ್ಗಿ ಅದನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದ.
Showing posts with label ಕಥೆ/ಸಣ್ಣಕತೆ ಅನ್ನೋ ಗದ್ಯ. Show all posts
Showing posts with label ಕಥೆ/ಸಣ್ಣಕತೆ ಅನ್ನೋ ಗದ್ಯ. Show all posts
Friday, August 10, 2007
Wednesday, October 18, 2006
ಹೀಗೊಂದು ಪ್ರೇಮ ಕಥೆ...
ಆತನಿಗೆ ಜಗವೆಲ್ಲ ಅಂಧಕಾರ.ಎನೇನೂ ಕಾಣದು.ಆತನಿಗೆ ತನ್ನ ಮೇಲೆ ಬೇಸರ,ಜಿಗುಪ್ಸೆ.ಈ ಕುರುಡು ಜೀವನಕ್ಕಿಂತ ಸಾವೇ ಮೇಲು ಎಂದು ಗೊಣಗುತ್ತಿದ್ದ.ಅತನನ್ನು ಪ್ರೀತಿಸುವವರು ಯಾರೂ ಇರಲಿಲ್ಲ, ಅವಳೊಬ್ಬಳ ಹೊರತಾಗಿ.ಆಕೆಗೆ ಗೊತ್ತಿತ್ತು ಅವನಿಗೆ ಕಣ್ಣಿಲ್ಲವೆಂದು. ಆದರೂ ತೀವ್ರವಾಗಿ ಪ್ರೀತಿಸುತಿದ್ದಳು. ತನಗೆ ದೃಷ್ಟಿ ಭಾಗ್ಯ ದೊರತ ದಿನವೆ ಆಕೆಯನ್ನು ಮದುವೆ ಆಗುವುದಾಗಿ ಆತ ಹೇಳುತಿದ್ದ.
ಅದೆಂಥಾ ಪವಾಡವೋ ಎನೋ? ಅವನಿಗೆ ಎಕಾಎಕಿ ಒಂದು ದಿನ ದೃಷ್ಟಿ ಬಂತು. ಎರಡೂ ಕಣ್ಣುಗಳು ಕಾಣಿಸತೊಡಗಿದವು.ಅಷ್ಟು ದಿನ ತನ್ನನ್ನು ಪ್ರೀತಿಸಿದ ಹುಡುಗಿಯನ್ನು ಹುಡುಕಲಾರಂಭಿಸಿದ.ಕೊನೆಗೂ ಆಕೆ ಸಿಕ್ಕಳು. ಆತನ ಜಂಘಾಬಲವೇ ಉಡುಗಿಹೋಯಿತು.ನೋಡಿದರೆ ಆಕೆಗೆ ಎರಡೂ ಕಣ್ಣುಗಳಿಲ್ಲ! ಆತನಿಂದ ಮಾತು ಬಾರದಿದ್ದನ್ನು ಗಮನಿಸಿ ಆಕೆ ಕೇಳಿದಳು-"ನನ್ನನ್ನು ಮದುವೆ ಆಗ್ತೀಯಾ?".
"ಈ ಕುರುಡಿಯನ್ನು ಮದುವೆ ಆಗುವುದುಂಟಾ?,ಸಾಧ್ಯವೇ ಇಲ್ಲಾ .ನಿನ್ನಂಥ ಕುರುಡಿಯನ್ನು ಮದುವೆಯಾಗಲಾರೆ" ಎಂದು ಬಿಟ್ಟ.ಆಕೆಗೆ ದುಃಖ ತಡೆದುಕೊಳ್ಳಲಾಗಲಿಲ್ಲ.ಒಂದೇ ಸಮನೆ ಬಿಕ್ಕಿ ಬಿಕ್ಕಿ ಅತ್ತಳು .ಕೊನೆಗೆ ಹೋಗುವಾಗ ಆತನೆಡೆಗೆ ಕೈ ಬೀಸುತ್ತಾ "ಮದುವೆಯಾಗದಿದ್ದರೆ ಪರವಾಗಿಲ್ಲ ಬಿಡು.ನನ್ನನ್ನು ನೀನು ನೋಡಿಕೊಳ್ಳಬೇಕಾಗಿಲ್ಲ.ಆದರೆ ನನ್ನೆರಡು ಕಣ್ಣುಗಳನ್ನು ಜೋಪಾನವಾಗಿಟ್ಟುಕೊಂಡಿರು" ಎಂದು ಹೇಳಿ ಹೊರಟು ಹೋದಳು.

Saturday, June 03, 2006
ಪ್ರಶ್ನೆ
ಶಾಲೆಯ ಆವರಣದಲ್ಲಿ ಎಲ್ಲರೂ ಆಟವಾಡುತ್ತಿದ್ದರೆ ಇವಳು ಮಾತ್ರ ಸ್ವಲ್ಪ ಸುಸ್ತಾದವರಂತೆ ಒಂದು ಕಡೆ ಕೂತಿದ್ದಳು.
ಆ ಹುಡುಗಿಯ ಹತ್ತಿರ ಬಂದ ಟೀಚರ್ 'ಯಾಕೆ?ಏನಾಯ್ತು?' ಎಂದು ವಿಚಾರಿಸಿದರು.
ಮೊದಲೇ ಮಾತಿನಮಲ್ಲಿಯಾಗಿದ್ದ ಆವಲು ಶುರುಮಾಡಿದಳು;
"ನಾನು ಚೆನ್ನಾಗಿದ್ದೀನಿ ...ಟೀಚರ್.ಸ್ವಲ್ಪ ಸುಸ್ತಾಯಿತು.ಅದಕ್ಕೆ ಕೂತುಕೊಂಡೆ ಅಷ್ಟೆ.ಮತ್ತೆ ಟೀಚರ್,ಏನು ವಿಷಯ ಗೊತ್ತಾ?ಮೊದಲೆಲ್ಲಾ ನಮ್ಮ ಮನೆಯಲ್ಲಿ ಅಪ್ಪ ,ಅಮ್ಮ... ಬಹಳ strict ಆಗಿ ಇರ್ತಿದ್ರು.ಹೊತ್ತಿಗೆ ಸರಿಯಾಗಿ ಊಟ ಮಾಡಬೇಕು,ನಿದ್ದೆ ಮಾಡಬೇಕು, ಚೆನ್ನಾಗಿ ಓದ್ಕೊಬೇಕು ಅಂತೆಲ್ಲಾ ಹೇಳ್ತಿದ್ರು.ಆದ್ರೆ ಈಗ ನಾನು ಏನು ಮಾಡಿದ್ರು ಬಯ್ಯೋದೇ ಇಲ್ಲ.ಎನು ಕೇಳಿದರೂ ತೆಗೆದುಕೊಡ್ತಾರೆ. ಯಾಕೋ ಗೊತ್ತಿಲ್ಲ ಚೆನ್ನಾಗಿ ಓದದೆ ಇದ್ರೂ ಕೇಳೋದೇ ಇಲ್ಲಾ.ಎಷ್ಟು ಬದಲಾಗಿದ್ದರೆ ಗೊತ್ತಾ.ಮೊನ್ನೆ ನನ್ನ ಚಿಕ್ಕಮ್ಮ ಅಮ್ಮನ ಹತ್ರ ಕೇಳ್ತಾ ಇದ್ರು-'ನಿನ್ನ ಮಗಳ ಬ್ಲಡ್ ಕ್ಯಾನ್ಸರ್ ಗುಣ ಮಾಡೊದಕ್ಕೆ ಬೇರೆ ಎನಾದ್ರು ಪರಿಹಾರ ಇದೆಯಂತಾ?.
ಟೀಚರ್..,ಈ ಬ್ಲಡ್ ಕ್ಯಾನ್ಸರ್ ಅಂದ್ರೆ ಏನು?'
ಟೀಚರ್ ಬಿಟ್ಟ ಬಾಯಿ ಬಿಟ್ಟಂತೆ ಕೂತಿದ್ದರು.

Subscribe to:
Posts (Atom)