Showing posts with label ಕವಿತೆ ತರಹದ್ದು ಅನ್ಸತ್ತೆ. Show all posts
Showing posts with label ಕವಿತೆ ತರಹದ್ದು ಅನ್ಸತ್ತೆ. Show all posts

Tuesday, January 01, 2008

3 ಸಾಲುಗಳು -೦೪





ಹೊಸ ವರ್ಷ ಹೊಸ ಹರುಷ ತರಲಿ ಅ೦ತ
ಎಲ್ಲರ ಕೈ ಕುಲುಕುತ್ತ ನಗುತ್ತಾ ತಿರುಗಾಡುತ್ತಿದ್ದವನ
ತಲೆ ತು೦ಬಾ ಹಳೇ ಕಷ್ಟಗಳೇ ತು೦ಬಿದ್ದವು.




ಹೊಸ ವರ್ಷದಲ್ಲಿ ಹೊಸ ಸ೦ಕಲ್ಪ ತಗೊಂಡು
ಇನ್ನೂ ಚೆನ್ನಾಗಿ ಬದುಕಲು ಅವನು ನಿರ್ಧರಿಸಿದ್ದ
ಆದರೆ ಆ ಹಳೇ ಆಲಸ್ಯ ಅವನನ್ನ ಬದಲಾಗಲು ಬಿಡಲಿಲ್ಲ

Sunday, September 16, 2007

3 ಸಾಲುಗಳು -೦೩


ಹಳೆ ಗೆಳೆಯರನ್ನ ಹುಡುಕಿಕೊ೦ಡು ದೂರದ ಊರಿಗೆ ಹೋದಾಗ
ಸಿಕ್ಕಿದ್ದು ಬೊಗಸೆ ತು೦ಬಾ ನೆನಪುಗಳು ಅವಕ್ಕೊಸ್ಕರ ಅಲ್ಲಿ ತನಕಾ ಹೋಗಬೇಕಿತ್ತಾ..
ಸ್ವಲ್ಪ ಮನದ ಕಸ ಸರಿಸಿದರೆ ಇಲ್ಲೆ ಸಿಗುತ್ತಿತ್ತು.

Thursday, September 06, 2007

3 ಸಾಲುಗಳು -೦೨



ಮುಚ್ಚಿದ ಬಾಗಿಲಿನ ಕತ್ತಲೆ ಕೋಣೆಯಲ್ಲಿ ಅವರಿಬ್ಬರು
ಪ್ರೀತಿಯ ದಿವ್ಯಬೆಳಕನ್ನ ಹುಡುಕುತ್ತಿದ್ದರೆ
ಉಳಿದವರೆಲ್ಲರಿಗೆ ಕಾಮದ ವಾಸನೆ ಬಡಿಯುತ್ತಿತ್ತು

Wednesday, September 05, 2007

3 ಸಾಲುಗಳು...


ನನ್ನ ಮನದಲ್ಲಿ ಸದಾ ಕುಣಿಯುತ್ತಿರುವ ಸದಾ ಹಾಡುತ್ತಿರುವ ನಿನಗೆ
ಯಾರಾದ್ರೂ ಬ೦ದು ನನ್ನ ಮನದರಸಿ ಯಾರು ಅ೦ತ ಕೇಳಿದರೆ
ನಾಲಿಗೆಗೆ ಬರಲು ನಿನಗೆ ಯಾಕೆ ನಾಚಿಕೆ?


ಜಗತ್ತಿನಲ್ಲಿ ಎರಡು ಅಲುಗಿನ ಕತ್ತಿಗಿ೦ತ ಹರಿತ
ಯಾವುದು ಇಲ್ಲ ಅ೦ತ ನಾನು ನ೦ಬಿದ್ದೆ
ನಿನ್ನ ಕಣ್ಣುಗಳ ನೋಡುವ ತನಕ

(ರಾಜೀವ ಬರೆದ ಹೈಕುಗಳ(ಜಪಾನಿ ಭಾಷೆಯಲ್ಲಿ ಕಿರುಗವಿತೆ)ಓದಿ ನಾನು ಬರೆಯೋ ಪ್ರಯತ್ನ ಮಾಡಿದೆ.)

Wednesday, August 01, 2007

ಮಳೆ ...

ಹೊರಗು ಮಳೆ ಸುರಿಯುತ್ತಿದೆ
ಮಳೆಯಿಂದ ಇಳೆ ಓದ್ದೆ
ಮನಸು ಓದ್ದೆ ಓದ್ದೆ
ಮಳೆ ನೀರು ನೆಲ ಸೇರಿ ಹೊರಗೆಲ್ಲ ಕೆಸರು..
ಹಳೆ ನೆನಪುಗಳು ಕದಡಿ ಮನವೆಲ್ಲ ಕೆಸರು
ಧೋ ಎಂದು ಮಳೆ ಸುರಿದು ಕೆಸರು ಕೊಚ್ಚಿ ಹೋಗಲಿ
ನೆನಪುಗಳು ಕೊಚ್ಚಿ ಹೋಗಲಿ

ಕೂತು ಕಾಯುತ್ತಿದ್ದೇನೆ
ಹಾಳಾದ್ದು ನಿನ್ನ ಕಣ್ಣುಗಳು ಯಾವುದು ಕೊಚ್ಚಿ ಹೋಗದಂತೆ ತಡಿಯುತ್ತಿವೆ
ಯಾಕೆ ಬೇಕಿತ್ತು ನಿನ್ನ ಕಣ್ಣುಗಳ ಸಹವಾಸ
ಮೊದಲು ನಾನು ಸುಖಿಯಾಗಿದ್ದೆ
ನೆಮ್ಮದಿ ಇತ್ತು ಬಾಳಲ್ಲಿ
ಕಣ್ತುಂಬ ನಿದ್ದೆ ಇತ್ತು

ಮಳೆ ಬಂದು ನೆನಪುಗಳ ಕದಡಿ ಹೊಗಿದೆ,
ಧೋ ಎಂದು ಮಳೆ ಸುರಿದು ಎಲ್ಲಾ ಕರಗಿ ಹೋಗಬಾರದೆ..

(ಹೊರಗೆ ನೋಡಿದಾಗ ಮಳೆ ಸುರಿಯುತಿತ್ತು....ಮನಸಿಗೆ ಬಂದಿದ್ದನ್ನ ಬಂದ ಹಾಗೆ ಬರೆದೆ)

Sunday, October 29, 2006

ಗಂಗೂಲಿಯೆಂಬ ಶಪಿತ ರಾಜಕುಮಾರನ ಮಗಳ ಪ್ರಾರ್ಥನೆ

ಬ್ಯಾಟ ನೇವರಿಸಿ ಎದೆಗಪ್ಪಿಕೊಂಡ ಗಂಗೂಲಿಯ
ಮಗಳ ಕಣ್ಣಂಚಿನಲ್ಲಿ ಒಂದು ಹನಿ ನೀರು.
ಸದಾ ಕ್ರಿಕೆಟ್ ಮುಗಿಸಿ ಬರುತ್ತಿದ್ದ ಅಪ್ಪನ
ತೊಡೆಯಲ್ಲಿ ಕುಳಿತು ಮಗಳದೇ ಕಾರುಬಾರು.

ಅಪ್ಪ ಕ್ರಿಕೆಟ್ ಆಡುತ್ತಿದ್ದಾಗ ಬ್ಯಾಟ್ ಕಿಟ್ ಒಳಗಿತ್ತು,
ನಾನು ಎದೆಗಪ್ಪಿ ಕುಳಿತಿರುತಿದ್ದೆ.
ಈಗ ಬ್ಯಾಟ್ ಎದೆಗಪ್ಪಿದೆ,
ನಾನು ಮೂಲೆಗೆ ಎಂಬ ಅಳಲು.

ಯಾವಾಗ ಶರ್ಟ್ ಬಿಚ್ಚಿ ಮತ್ತೆ ಬೀಸುವೆ?
ಯಾವಾಗ ಬ್ಯಾಟ್ ಮತ್ತೆ ಕೈಗೆತ್ತಿಕೊಳುವೆ?
ಯಾವಾಗ ಶಾಪ ತೊಲಗಿ ಮತ್ತೆ ಆಡುವೆ?
ಎಂದು ಕಲಕತ್ತಾದ ಯುವರಾಜನ ಚಿಂತೆ.

ಸದಾ ಬ್ಯಾಟನಪ್ಪಿ ಟಿ.ವಿ.ಯ ಎದುರು
ಹತಾಶನಾಗಿ ಕುಳಿತು ಹಳೇ ಪಂದ್ಯದ
ವೀಡಿಯೋ ನೊಡುತ್ತಿರುವ ತಂದೆಯ ಪಕ್ಕದಲಿ
ಕುಳಿತ ಮಗಳ ಮುಖ ಸೋತು ಬಿದ್ದಿತ್ತು.

ತಂಡದಲಿ ಸ್ಥಾನ ಸಿಗಲಿ,ಸಿಕ್ಕಿದರೆ ನನ್ನ ಮೌಲ್ಯ ತೋರಿಸುವೆ
ಎಂದು ಗಂಗೂಲಿಯ ಪ್ರಾರ್ಥನೆ.
ಅಪ್ಪ ಕ್ರಿಕೆಟ್ ಆಡಲಿ ,ಬ್ಯಾಟ್ ಮೂಲೆಗೆ ಹೋಗಲಿ,
ನನ್ನ ಪುನಃ ಎದೆಗಪ್ಪಿಕೊಳ್ಳಲಿ ಎಂದು ಮಗಳ ಪ್ರಾರ್ಥನೆ.

Tuesday, July 11, 2006

ಬದುಕು ಸಾಗಲೇಬೇಕು

ಬಿರು ಬೇಸಿಗೆಯ ಬಿರು ಮಧ್ಯಾಹ್ನ
ಹೃದಯ ಕಳಕ್ಕೆಂದು ಬೇನೆಯಲಿ
ನೋವು ಕ್ಷಣವೊಂದರಲಿ ಮಾಯ
ಹಿಂದೆಂದು ಇಲ್ಲದಂತೆ ಹಗುರಾಯಿತು ಜೀವ

ಬದುಕ ಜಂಜಾಟದಿಂದ ಮುಕ್ತನಾಗಿ
ದೇವತೆಗಳೆಡೆಗೆ ನಸುನಗುತ್ತಾ ಹೊರಟೆ
ಅತ್ಮದಿಂದ ಪರಮಾತ್ಮನೆಡೆಗೆ
ಲೋಕದಿಂದ ಮುಕ್ತನಾಗಿ

ಕಣ್ಣೀರಧಾರೆಯ ಕಾಣುತಲಿತ್ತು
ಅಪ್ಪ ಅಮ್ಮ ಸ್ನೇಹಿತರ ನಲ್ಲೆಯ ಕಣ್ಣುಗಳಲಿ
ಕಣ್ಣೀರು ನಿಲ್ಲಿಸ ಹೊರಟರೆ
ಸಿಗದಂತೆ ಹರಿದುಹೋಗುತಲಿತ್ತು

ಮರಳುವನೆಂದು ಕಾಡಿದೆ ಬೇಡಿದೆ
ಅವನ ಕಿವಿಗಳು ಕಿವುಡಾಗಿದ್ದವು.
ಹೃದಯ ಬಿಚ್ಚಿ ಅತ್ತೆ
ಅವನ ಕಣ್ಣುಗಳು ಕುರುಡಾಗಿದ್ದವು

ಕಾಲ ನಡೆಯುತಲಿತ್ತು ದಿನಗಳು ಮಾಸಗಳಾದವು
ಮಾಸಗಳು ವರುಷಗಳಾದವು
ಏಕಾಂಗಿ ಬದುಕಿಗೆ
ಏಲ್ಲರ ಕಾಣಹೊರಟರೇ...

ಅಪ್ಪ ಅಮ್ಮಗೆ ಮುದ್ದಿನ ಚಿಕ್ಕಮಗನಿದ್ದ
ಸ್ನೇಹಿತರಿಗೆ ಹೊಸ ಸ್ನೇಹಿತರಿದ್ದರು
ನಲ್ಲೆಗೆ ಆತ್ಮಸಖ ಸಿಕ್ಕಿದ್ದ
ಎಲ್ಲರ ಕಣ್ಣೀರು ಇಂಗಿತ್ತು

ಅವರ ನಗುವಿನ ಸಂತಸ ಎನಗಿತ್ತು
ತಿರುಗಿ ಬರಲು ಕಣ್ಣು ಮಂಜಾಗಿತ್ತು
ಯಾರಿಗೂ ನನ್ನ ಯೋಚನೆ ಇಲ್ಲದ ಬಗ್ಗೆ
ಅವರ ಕನಸಲಿ ಮರೆಯಾಗಿರುವುದಕ್ಕೆ

ತಿರುಗಿದರೆ ಹೃದಯಗಳು ಹಿಂಬಾಲಿಸುತ್ತಿದ್ದವು
ಅವು ಅಪ್ಪ ಅಮ್ಮನ ಹೃದಯಗಳು
ನಾನು ಅವರಲಿ ಬದುಕಿದ್ದೆ
ಚಿರಕಾಲ ಬದುಕುವೆ ಅವರ ಹೃದಯದ ತುಂಡಾಗಿ

ಹೊಸದಾಗಿ ಸೇರಿದವು ಕೆಲ ಹೃದಯಗಳು
ನನ್ನ ಪ್ರಾಣ ಸ್ನೇಹಿತರಾಗಿ
ನನ್ನ ಸ್ನೇಹದ ನೆನಪಿನಲಿ
ನನ್ನ ಒಡನಾಟ ಕಳಕೊಂಡ ದು:ಖದಲಿ

ಬಲುದೂರದಿ ಒಂಟಿ ಹೃದಯವೊಂದಿತ್ತು
ಸನಿಹಕೆ ಹೋದರೆ ಅದು ನನ್ನದಾಗಿತ್ತು
ನನ್ನ ಪ್ರೀತಿಯಾಗಿತ್ತು.ನಾನು
ಬದುಕುತಿದ್ದೆ ಅವಳ ಮಿಡಿತವಾಗಿ

ಯಾವುದು ಬದಲಾಗಲಿಲ್ಲ ಲೋಕದಲಿ
ಕಾಲದ ಹೊಯ್ಗೆ ಅವರ ದು:ಖವ ಮುಚ್ಚಿತ್ತು
ನಾನಿಲ್ಲದೆ ಬದುಕಲು ನಾನಿಲ್ಲದೆ ನಗಲು
ಹೃದಯ ಗಟ್ಟಿ ಮಾಡಿದ್ದರು

ಯಾರ ಹಂಗಿಲ್ಲದೆ ಬದುಕು ಸಾಗಲೇಬೇಕು
ಪ್ರೀತಿಯ ಸೆಲೆ ಬತ್ತಿ ಹೋದ ಮೇಲೂ
ಬದುಕು ಹೀಗೆ ಸಾಗುತ್ತದೆ.
ಇಲ್ಲದವರನ್ನು ನೆನಪಿನಿಂದ ಅಳಿಸುತ್ತಾ
------------------------
( ಸರಿತಾಳ ಆಂಗ್ಲ ಕವಿತೆಯ ಅನುವಾದ )
ಕವಿತೆ -

That's the way life is!
-------------------------

One bright summer afternoon
I felt a twisting pain in my heart
But that was just for a moment
And then I felt lighter than ever.

I was free from entangles of life
I smiled to the angels and sky
I was now a divine soul
Away from all the worldly affairs

But I could see the flood of tears
Of my parents, my friends and my love
I tried hard to stop them
But nothing could ever restore them.

I begged him to let me go back
But he listened to none
I cried my heart out
But he got himself blind.

Hours passed by and days turned to months
And hence a year passed by
With no sign of either of them
When I got to see all of them again

My parents were happy with my siblings
My friends had made new ones
My love had found his mate
No one there was shedding tears

I was happy to see them smile again
But I cried on my way back
For no one now thought of me
I was totally forgotten in their dreams

But then I saw two hearts following me
They were of my mom and dad
They said I was alive in them
And will be with them forever.

A few more hearts then joined them
They were of my very own friends
Who still have my memories afresh
Who still miss me in the crowd.

There stood far away a lonely heart
I went closer to find my heart within it
It was none other than my love
Who was living because of my heart beating in him

I now knew that nothing has changed
It’s only the time that has buried their sorrows
To smile in my absence to live without me
To be strong is all they have learnt.

Life keeps going no matter who is there
No matter how much you love one
You need to live when he is gone
That is the way life is!

Sunday, June 11, 2006

ಜೀವನದ ಮೌಲ್ಯ ತಿಳಿ

ನಡೆಯುತ ಬರಲು ಯೋಚಿಸುತಿದ್ದೆ
ಮಾನವನೇಕೆ ಈ ರೀತಿ
ಸಿಗದಿರುವುದಕ್ಕೆ ಹಲುಬಿ
ಸಿಕ್ಕಿರುವುದನೆಲ್ಲಾ ಕಳೆದು ಕೊಳ್ಳುತ್ತಾನೆ

ನದಿಯು ಹರಿಯುತಲಿತ್ತು ಸದ್ದಲಿ ಹಾಡುತ
ಮುಂದಿನ ಪಥದ ಚಿಂತೆ ಮರೆತು
ಅಕ್ಕಪಕ್ಕದ ದಡಗಳ ತಡೆಗಳ ಮರೆತು
ತನ್ನ ಸ್ವಚ್ಹಂದ ಹರಿವನು ಅನುಭವಿಸುತ

ಗಾಳಿಯು ಪಿಸುಮಾತಿನಲಿ ಹೇಳುತಿದೆ
ಸುತ್ತಲೂ ಲೋಕವ ನೋಡು
ಗಾಳಿಗೆ ಚಂಚಲೆಯಾದ ಎಲೆಗಳು
ದುಂಬಿಯ ಝೇಂಕಾರ

ದೇವಸೃಷ್ಟಿಯೇ ನಿಗೂಡ
ಎಲ್ಲಾ ಜೀವಿಗಳು ಸಂತಸದಿ ಬದುಕುತಿವೆ
ಆದರೆ ಮನುಷ್ಯ ತೀರಾ ಹುಚ್ಚ
ಸಿಕ್ಕಿದ್ದೆಲ್ಲವ ಪಡೆದು ಸಿಗದಿರುವುದಕ್ಕೆ ಕೊರಗುತಿರುವ

ಬದುಕು ಕಳೆದುಹೋಗಲು ಬಲು ಚಿಕ್ಕದು
ಕಳೆದುಹೋಗುತಿದೆ ಈಗ ಗಡಿಬಿಡಿ ಜಂಜಾಟದಲಿ
ಕಳೆದುಹೋಗಿರುವ ಜೀವನದ ಮೌಲ್ಯ ತಿಳಿಯಲು
ಗೋರಿಯಲಿ ಮಲಗಿರುವವನನ್ನು ಎಬ್ಬಿಸಿ ಕೇಳಿ ನೋಡು
-----------------------------------
( ಸರಿತಾಳ ಆಂಗ್ಲ ಕವಿತೆಯ ಅನುವಾದ )
ಕವಿತೆ -

KNOW THE VALUE OF LIFE!
------------------------

I was walking down the lane
Thinking that I was so insane
Always been cribbing for what I lacked
When all I had too got sacked.

The river was singing all the way
Least bothered what ahead did lay
Never sad for being limited by its bank
Always laughing at its prank.

The breeze did whisper something to me
Just look around in the woods and see
The fluttering leaves of the tree
Were adding to the humming tone of bee.

Strange that every creation of lord
Are happy without a single complaining word
But its this human so very mean
Never happy are they seen.

Life is too short to waste
You lose the valuable in haste
Know the value of what you have
From the one who is in grave!

Saturday, June 10, 2006

ವಿರಹಿ ಹೃದಯಗಳ ನಲ್ಲ

ಸಾಸಿರ ನಕ್ಷತ್ರಗಳ ಜೊತೆಗಿದ್ದರೂ
ಚಂದಿರನೊಂಟಿ.
ಸೂರ್ಯರಶ್ಮಿಯೊಡನೆ ಕಣ್ಣಾಮುಚ್ಹಾಲೆಯಾಡುತ,
ನಕ್ಷತ್ರ ಚಪ್ಪರದಲಿ ಹೊಳೆಯುತ.

ಬಹುದೂರದಿ ಹೊಳೆವ ತಾರೆಗಳಿದ್ದರೂ,
ಚಂದಿರನೇಕಾಂಗಿ .ಮೌನಿ ಅದರೂ
ಆಗಸದಿ ಹೊಳೆಯುತ ನಿಂತಿರುವ,
ಮುಗಿಲ ಚುಕ್ಕೆಯಾಗಿ ಮಿನುಗಿ.

ಇಳೆಯ ನಲ್ಲನಲ್ಲೆಯರ
ಹೃದಯ ಭಾರಕೆ ಹೆಗಲು ಕೊಡುತ,
ಮಂದಸ್ಮಿತನಾಗಿ ವಿರಹದ
ನೋವನು ಕೇಳುತಲಿರುವ.

ಹೊಳೆ ಹೊಳೆವ ಸೂರ್ಯಕಾಂತಿಯೇ ಇರಲಿ,
ಅಕಾರ ವಿಕಾರದ ಅನಂತ ನಕ್ಷತ್ರಗಳ ಸಂತೆಯೇ ಇರಲಿ,
ಅಗೆದಾಗ ಸಿಗುವ ಬೆಳಕಿನುಂಡೆಯಾಗಿ,
ವಿರಹಿ ಹೃದಯಗಳ ನಲ್ಲನಾಗಿ ಹೊಳೆವ ಚಂದಿರನೊಬ್ಬನೇ!
-----------------------------------
( ಸರಿತಾಳ ಆಂಗ್ಲ ಕವಿತೆಯ ಅನುವಾದ )
ಕವಿತೆ -
KING OF ALL THE LONELY HEARTS!
--------------------------------

Millions of twinkling stars around,
Still the moon stands there alone.
Sometimes hiding himself in sunlight,
Sometimes trying to smile with stars.

The stars are distant away,
And he has no one to speak.
Yet he does'nt lose his glory,
He stands there with a difference in the sky.

For all the lonely hearts on earth,
He is there to share the burden .
With a serene smile on face,
He listens to thier story.

However powerful may be the sun,
In whatever number may be the stars.
Yet no one can ever match him,
The king of all the lonely hearts!